ಜಿಲ್ಲೆಯ ಹುಮನಾಬಾದ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿನ ಕೆಲವು ಕಾರ್ಖಾನೆಗಳ ವಿಷಕಾರಿ ತ್ಯಾಜ್ಯವನ್ನು ತಂದು ಹುಡಗಿ ಹಳ್ಳದಲ್ಲಿ ಬಿಡುತ್ತಿದ್ದಾರೆ’ ಎಂದು ಗ್ರಾಮದ ಜನರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಂಬಮ್ಮಾ ಆರೋಪಿಸಿದ್ದಾರೆ..ಹುಮನಾಬಾದ ತಾಲ್ಲೂಕಿನ ಹುಡಗಿ ಗ್ರಾಮದ ಹಳ್ಳದಲ್ಲಿ ತ್ಯಾಜ್ಯ ವೀಕ್ಷಣೆ ಮಾಡಿ ಅಧಿಕಾರಿಗಳು ವಿರುದ್ಧ ಆಕ್ರೋಶ ಹೀರಹಾಕಿ.
‘ತ್ಯಾಜ್ಯದಿಂದಾಗಿ ಹಳ್ಳದಲ್ಲಿನ ಅನೇಕ ಮೀನುಗಳು ಮೃತಪಡುತ್ತಿವೆ. ಈ ಹಳ್ಳದ ಸುತ್ತಮುತ್ತಲೂ ರೈತರ ಹೊಲಗಳು ಹಾಗೂ ಸರ್ಕಾರಿ ಕೊಳವೆ ಬಾವಿಗಳು ಇವೆ.
ತ್ಯಾಜ್ಯ ಬಿಟ್ಟಿರುವ ಕಾರಣ ಸದ್ಯ ಗ್ರಾಮಸ್ಥರು ಮತ್ತು ರೈತರು ಆತಂಕದಲ್ಲಿ ಇದ್ದಾರೆ. ಈ ಬಗ್ಗೆ ಮೇಲಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹಲವು ಆದಿಕಾರಿಗಳು ಕಾರ್ಖಾನೆ ಮಾಲಿಕ ಜೊತೆಗೆ ನಿಕಟ್ಟ ಸಂಭಂದ ಇಧೆ ಹಾಗಾಗಿಯೇ ಅಧಿಕಾರಿಗಳು ಯಾವುದೇ ತ್ಯಾಜ್ಯ ಕಂಡು ಬರ್ತಿಲ ಅಂತ ಹೆಳುತ್ತಿದ್ದಾರೆ ಅಂತ ಅಧಿಕಾರಿಗಳ ವಿರುದ್ದ ಆಕ್ರೋಶ ಹೋರ ಹಾಕಿದ್ರು. ಅಧಿಕಾರಿಗಳು ಯಾವದೆ ಕ್ರಮಕ್ಕೆ ಮುಂದಾಗದಿದ್ದರ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರಿಂದ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.