ಮಂಡ್ಯ :- ಪ್ರತಿಯೊಬ್ಬರಲ್ಲೂ ಒಂದು ಶಕ್ತಿ, ಜೊತೆಗೊಬ್ಬ ಕಲಾವಿದ ಕೂಡ ಇರುತ್ತಾನೆ. ಆದರೆ, ಅದನ್ನು ಹೊರ ತರಲು ತರಬೇತಿ ಶಿಬಿರಗಳು ಸಹಕಾರಿಯಾಗಲಿವೆ ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.
ಮದ್ದೂರು ಪಟ್ಟಣದ ಪಿಕಾರ್ಡ್ ( ಪಿ ಎಲ್ ಡಿ ) ಬ್ಯಾಂಕ್ ನ ಕುವೆಂಪು ಸಭಾಂಗಣವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ತರಬೇತಿಗಳು ಜನರಲ್ಲಿ ಇರುವ ಮಾಹಿತಿ ಕೊರತೆ ಹೊಗಲಾಡಿಸುವ ತನ್ಮೂಲಕ ಶಿಕ್ಷಣ ಮತ್ತು ಸಂವಹನ ಮೂಡಿಸುವಲ್ಲಿ ಸಹಕಾರಿಯಾಗಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವ ಜೊತೆಗೆ ರೈತರು, ಯುವ ಜನರು, ಮಹಿಳಾ ಸಂಘಗಳ ಕುಶಲತೆ ಹೆಚ್ಚಿಸಲು ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಿರುವ ಪಿಕಾರ್ಡ್ ಬ್ಯಾಂಕ್ ನ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ತರಬೇತಿ ಕೇಂದ್ರಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಆಶಯಗಳ ಕುರಿತು ಸಂಪನ್ಮೂಲ ವ್ಯಕ್ತಿ ಕೆ. ರವಿಕುಮಾರ್ ಮಾತನಾಡಿದರು.
ಆರ್ಥಿಕ ಸಾಕ್ಷರತೆ ಕುರಿತು ಅರುಣಾ ಕುಮಾರಿ ರವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಂಪೇಗೌಡ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಣಾಮ್ ಸತೀಶ್, ವಕೀಲರಾದ ಬೊಮ್ಮೆಗೌಡ, ಬಿ.ವಿ. ಶಂಕರೇಗೌಡ, ಉಮಾಶಂಕರ್ ನಿರ್ದೆಶಕರಾದ ಕೃಷ್ಣೇಗೌಡ, ಮುತ್ತರಾಜು, ಸಿದ್ದೇಗೌಡ, ಸವಿತಾ, ಈರೇಗೌಡ, ದಾಸನಾಯಕ ಹಾಗೂ ಎಸ್.ಬಿ. ಮಹಾದೇವ್ ಶಿವಲಿಂಗೇಗೌಡ ಉಪಸ್ಥಿತರಿದ್ದರು.