ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.24ರಿಂದ ಅನಿರ್ದಿಷ್ಟಾವಧಿ ಧರಣಿ ಮಾಡಲು ಬೆಂಗಳೂರಿನಲ್ಲಿ ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಸಾರಿಗೆ ನಿಗಮ ನೌಕರರ ಸಮಾನ ಮನಸ್ಕರ ವೇದಿಕೆಯಿಂದ ಹೋರಾಟ ನಡೆಯಲಿದ್ದು ಧರಣಿ ಸಂಬಂಧ ಇಂದು ಕಾರ್ಮಿಕ ಇಲಾಖೆಗೆ ಸಾರಿಗೆ ನೌಕರರು ನೋಟಿಸ್ ನೀಡಲಿದ್ದಾರೆ.
ರಾಜ್ಯದ ನಾಲ್ಕು ನಿಗಮಗಳ ಬಸ್ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ.
ಸಾರಿಗೆ ನೌಕರರ ಕೂಟ ಈಗಾಗಲೇ ಎರಡು ಬಾರಿ ಮುಷ್ಕರ ಮಾಡಿದೆ. ನಾಲ್ಕು ದಿನ ಫ್ರೀಡಂಪಾರ್ಕ್ ನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದರು. ಸದ್ಯ ನಾಳೆಯಿಂದ ಎಲ್ಲಾ ಘಟಕಗಳಲ್ಲಿ ಮುಷ್ಕರದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಈ ಹಿಂದೆ ಸರ್ಕಾರ ಕೊಟ್ಟ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಲಿದ್ದಾರೆ.