ಬೆಂಗಳೂರು: ಸಮಾಜ ಕಾರ್ಯಕ್ಕೆ ಬಳಕೆಯಾಗ್ತಿದ್ದ ಟ್ರಸ್ಟ್ ವೊಂದರ ಒಳಗೆ ಅತಿಕ್ರಮಣ ಪ್ರವೇಶ ಆರೋಪ ಕೇಳಿ ಬಂದಿದೆ.. ಹೌದು ಡಾ. ಮೋದಿ ಪಬ್ಲಿಕ್ ಟ್ರಸ್ಟ್ ಗೇಟ್ ಮುರಿದು ಒಳ ನುಗ್ಗಿದ್ದ ಯತಿರಾಜ್ ನಾಯ್ಡು ಎಂಬಾತ ಅತಿಕ್ರಮಣ ಪ್ರವೇಶ ಮಾಡಿದ್ದಾನೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ…
ಸದ್ಯ ಟ್ರಸ್ಟ್ ನ ಮ್ಯಾನೇಜರ್ ಆಗಿ ಸುಭಾಷ್ ಮೋದಿ ಎಂಬುವರು ಡಾ.ಮೋದಿ ಪಬ್ಲಿಕ್ ಟ್ರಸ್ಟ್ ನ ಅಧಿಕಾರ ವಹಿಸಿಕೊಂಡಿದ್ದಾರಂತೆ.. ಇನ್ನು ಟ್ರಸ್ಟ್ ನ ಕೆಲ ಜಾಗವನ್ನ ಸಾಮಾಜಿಕ ಕಾರ್ಯಕ್ಕೆ ಬಳಕೆಯಾಗಲಿ ಅಂತಾ ಬೇರೆಯವರುಗೂ ನೀಡ್ತಿದ್ದಾರೆ.
ಅಲ್ಲದೆ ಅದೇ ರೀತಿ ಮಹಿಳಾ ಸಾಮಾಜಿಕ ಕಾರ್ಯಕರ್ತರಿಗೆ ಅದ್ರಲ್ಲಿ ಒಂದಷ್ಟು ಜಾಗ ಬಿಟ್ಕೊಟ್ಟಿದ್ರು.. ಆದ್ರೆ ಈದೆ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಈ ರೀತಿ ಅತಿಕ್ರಮಣ ಆಗ್ತಿದೆ ಅಂತಾ ಸುಭಾಷ್ ಮೋದಿ ಆರೋಪಿಸಿದ್ದಾರೆ.. ಯತಿರಾಜ್ ನಾಯ್ಡು ಎಂಬುವರು ಸಂಘಟನೆ ಮತ್ತು ಹೋರಾಟ ಹೆಸ್ರಲ್ಲಿ(ಶಾಲಿ) ತನ್ನ ಬೆಂಬಲಿಗರನ್ನ ಕರೆತಂದು ಟ್ರಸ್ಟ್ ಒಳಗೆ ನುಗ್ಗಿ ಅತಿಕ್ರಮಣ ಮಾಡಿದ್ದಲ್ಲದೇ ಆ ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕಿ ದೌರ್ಜನ್ಯ ಮಾಡಿದ್ದಾರೆ ಅನ್ನೋ ಗಂಭೀರ ಆರೋಪವನ್ನ ಟ್ರಸ್ಟ್ ನ ಮ್ಯಾನೇಜರ್ ಸುಭಾಷ್ ಮೋದಿ ಮಾಡ್ತಿದ್ದಾರೆ.
ಅಲ್ಲದೇ ಮಹಿಳಾ ಸಾಮಾಜಿಕ ಕಾರ್ಯಕರ್ತರ ಮೇಲೂ ಯತಿರಾಜ್ ನೈಯ್ಡು ದೌರ್ಜನ್ಯ ಮಾಡಿದ್ದಾರೆ ಅಂತ ಆರೋಪ ಕೇಳಿ ಬಂದಿದೆ.. ಸದ್ಯ ಘಟನೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಸುಭಾಷ್ ಮೋದಿ ದೂರು ನೀಡಿದ್ದಾರೆ.( ಶಾಲಿ)ಇನ್ನುದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು ತನಿಖೆ ನಡೆಸ್ತಿದ್ದಾರೆ.