ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಕನಸು 500ವರ್ಷಗಳ ನಂತರ ಮತ್ತೆ ಸಾಕಾರಗೊಂಡಿದೆ. ಮೊನ್ನೆಯಷ್ಟೇ ಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಕೂಡಾ ಮಾಡಲಾಗಿದ್ದು ಅದೆಷ್ಟೋ ನೈಜ ಹಿಂದೂಗಳ ಭವ್ಯ ಕನಸು ಕೊನೆಗೂ ನನಸಾದ ಈ ಪವಿತ್ರ ದಿನ ಇತಿಹಾಸದಲ್ಲೇ ಅಚ್ಚಳಿಯದೆ ಉಳಿಯುತ್ತದೆ.
ರಾಮಲಲ್ಲಾ ಈಗ ತನ್ನ ದಿವ್ಯ ಮತ್ತು ಭವ್ಯ ರೂಪದಲ್ಲಿ ಎಲ್ಲರ ಮುಂದೆ ಕಾಣುತ್ತಿದ್ದು, ಸರ್ವರಿಗೂ ದರ್ಶನ ನೀಡುತ್ತಿದ್ದಾರೆ. ಪುರಾಣಗಳಲ್ಲಿ ವಿವರಿಸಲಾದ ಅವರ ನೋಟವನ್ನು ಆಧರಿಸಿ ಭಗವಾನ್ ರಾಮಲಲ್ಲಾ ಅವರ ಮಗುವಿನ ರೂಪವನ್ನು ಅನೇಕ ದೈವಿಕ ಆಭರಣಗಳು ಮತ್ತು ವಸ್ತಗಳಿಂದ ಅಲಂಕರಿಸಲಾಗಿದೆ.
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಆದ ಮೇಲೆ ಬಾಲರಾಮನಿಗೆ ದಿನಕ್ಕೊಂದು ರೀತಿ ಹೂವಿನ ಅಲಂಕಾರ ಮಾಡಲಾಗುತ್ತಿದ್ದು ಗಣರಾಜ್ಯೋತ್ಸವ ದಿನದಂದು ಬಾಲರಾಮನಿಗೆ ತ್ರಿವರ್ಣ ಬಣ್ಣದ ಹೂವಿನ ಹಾರವನ್ನು ಹಾಕಲಾಗಿತ್ತು.
ನೋಡುಗರ ಕಣ್ಣು ಸಾಲದಾಗಿದ್ದು ಎಲ್ಲರ ಮನ ಮುಟ್ಟುವಂತೆ ಬಾಲ ರಾಮ ಮಿಂಚುತ್ತಿದ್ದನು.