ಬೆಂಗಳೂರು: ಬೆಂಗಳೂರು ಐಟಿ ಸಿಟಿಯಾಗಿ ಮಾರ್ಪಟ್ಟಿದೆ.ಇದರಿಂದ ನಗರದೆಲ್ಲಡೆ ಇಂಗ್ಲಿಷ್ ನಾಮಫಲಕಗಳೇ ರಾಜಾಜಿಸುತ್ತಿದೆ. ರಾಜಧಾನಿಯಲ್ಲಿ ಕನ್ನಡ ನಾಮಫಲಕ ರೂಲ್ಸ್ ಇದ್ರೂ ಉದ್ದಿಮೆಗಳು ಫಾಲೋನೇ ಮಾಡ್ತಿಲ್ಲ.ಇದು ಕನ್ನಡ ಪರ ಸಂಘನೆಗಳ ಕೆಂಗಣ್ಣಿಗೆ ಗುರಿಯಾಗಿದೆ.ಈ ಬಗ್ಗೆ ಕೆರಳಿರೋ ಕರವೇ ಕನ್ನಡ ನೆಲ, ಜಲ, ಅನ್ನ ತಿಂದುಂಡು ಕನ್ನಡಕ್ಕೆ ಅಗೌರವ ತೋರುವ ಉದ್ದಿಮೆಗಳ ವಿರುದ್ದ ಕರವೇ ಕಹಳೆ ಮೊಳಗಿಸಿತ್ತು. ರಾಜಧಾನಿಯ ವಿವಿಧ ರಸ್ತೆಗಳಲ್ಲಿ ಬೃಹತ್ ರ್ಯಾಲಿ ನಡೆಸಿ ಇಂಗ್ಲಿಷ್ ಬೋರ್ಡ್ಗಳನ್ನ ಧ್ವಂಸಗೊಳಿಸಿ, ಜಾಹೀರಾತು ಫಲಕಗಳನ್ನು ಕಿತ್ತು ಹಾಕಿದ್ರು, ಹಾಗಾದ್ರೆ ಬೆಂಳೂರಿನಲ್ಲಿ ಕರವೇ ಇಂಗ್ಲಿಷ್ ಬೋರ್ಡ್ ಸಮರ ಹೇಗಿತ್ತು ಬನ್ನಿ ತೋರಿಸ್ತೀವಿ.
ಜಗತ್ತಿನ ಪ್ರಮುಖ ನಗರಗಳ ಪೈಕಿ ಬೆಂಗಳೂರು ಒಂದು. ವಿಶ್ವಮಟ್ಟದಲ್ಲಿ ಬೆಂಗಳೂರು ಹೆಸರು ರಾರಾಜಿಸುತ್ತಿದೆ.ನಗರ ಬೆಳೆದಂತೆ ಕನ್ನಡ ನೆಲದಲ್ಲೇ ಕನ್ನಡವನ್ನ ಕಡೆಗಣಿಸಲಾಗ್ತಿದೆ ಅನ್ನೋ ಆರೋಪ ಇದೆ. ನಗರದಲ್ಲಿ ನಾಮಫಲಕಗಲ್ಲಿ ಶೇ 60 ರಷ್ಟು ಕನ್ನಡ ನಾಮಫಲಕ ಆಳವಡಿಕೆಗೆ ಸರ್ಕಾರ ಸೂಚನೆ ನೀಡಿದ್ರೂ ಉದ್ದಿಮೆಗಳು ನಿರ್ಲಕ್ಷ್ಯ ಮಾಡ್ತಿವೆ.ಈ ಬಗ್ಗೆ ಕೆರಳಿಸಿರೋ ಕನ್ನಡ ಪರ ಸಂಘಟೆಗಳು ಇಂದು ಹೋರಾಟಕ್ಕೆ ಧುಮ್ಮುಕ್ಕಿದ್ದುವು. ಏರ್ಪೋರ್ಟ್ ಸಾದಹಳ್ಳಿ ಟೋಲ್ ಗೇಟ್ ನಿಂದ ಆರಂಭವಾದ ಇಂದಿನ ಹೋರಾಟ, ನಗರದ ವಿವಿಧ ರಸ್ತೆಗಳಲ್ಲಿ ರ್ಯಾಲಿ ನಡೆಸಿದ ಕರವೇ ಕಾರ್ಯಕರ್ತರು ಇಂಗ್ಲಿಷ್ ನಾಮಫಕಗಳನ್ನ ಧ್ವಂಸಗೊಳಿಸಿ, ಜಾಹೀರಾತು ಫಲಕಗಳನ್ನ ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ರು.