ಅಯೋಧ್ಯೆ: ರಾಮಮಂದಿರದಲ್ಲಿ ರಾಮನವಮಿ ಸಂಭ್ರಮ ಕಳೆಗಟ್ಟಿದೆ. ಮಂದಿರ ಉದ್ಘಾಟನೆಯ ಬಳಿಕ ಮೊದಲ ರಾಮನವಮಿ ಆಚರಣೆಗೆ ಸಿದ್ಧತೆ ಭರದಿಂದ ಸಾಗಿದೆ. ರಾಮನವಮಿಯಂದು ಅಯೋಧ್ಯೆಯ ರಾಮಮಂದಿರಕ್ಕೆ 1,11,111 ಕೆಜಿ ಲಡ್ಡುಗಳನ್ನು ಏಪ್ರಿಲ್ 17 ರಂದು ನೈವೇದ್ಯ ಮತ್ತು ವಿತರಣೆಗಾಗಿ ಕಳುಹಿಸಲಾಗುವುದು ಎಂದು ದೇವ್ರಹ ಹನ್ಸ್ ಬಾಬಾ ಟ್ರಸ್ಟ್ ನ ಟ್ರಸ್ಟಿ ಅತುಲ್ ಕುಮಾರ್ ಸಕ್ಸೇನಾ ತಿಳಿಸಿದ್ದಾರೆ.
ಕಾಶಿ ವಿಶ್ವನಾಥ ದೇಗುಲ ಅಥವಾ ತಿರುಪತಿ ಬಾಲಾಜಿ ದೇಗುಲಕ್ಕೂ ಪ್ರತಿ ವಾರ ವಿವಿಧ ದೇವಸ್ಥಾನಗಳಿಗೂ ಲಡ್ಡು ಪ್ರಸಾದವನ್ನು ಕಳುಹಿಸಲಾಗುತ್ತದೆ ಎಂದು ಸಕ್ಸೇನಾ ಹೇಳಿದ್ದಾರೆ. ಜ.22 ರಂದು ಅಯೋಧ್ಯೆಯಲ್ಲಿ ನಡೆದಿದ್ದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನ ದೇವ್ರಹ ಹಂಸ ಬಾಬಾ ಆಶ್ರಮವು ನೈವೇದ್ಯಕ್ಕಾಗಿ 40,000 ಕೆಜಿ ಲಡ್ಡುವನ್ನು ಕೊಡುಗೆಯಾಗಿ ನೀಡಿತ್ತು.