ತುಮಕೂರು: ಯುವಕನೊಬ್ಬ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಹಳಿಗೆ ಕಾಲು ಸಿಲುಕಿ ಮೃತಪಟ್ಟಿರುವ ಘಟನೆ ತುಮಕೂರಿನ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ 4 ರಲ್ಲಿ ನಡೆದಿದೆ. ಛಾಯಾಂಕ್ (24) ಮೃತ ದುರ್ಧೈವಿಯಾಗಿದ್ದು, ಯುವಕ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಅಮ್ಮಸಂದ್ರ ಗ್ರಾಮದವನಾಗಿದ್ದಾನೆ.
ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಕೆಲಸ ಮಾಡ್ತಿದ್ದ ಛಾಯಾಂಕ್ ಬೆಂಗಳೂರಿನಿಂದ ತುಮಕೂರಿಗೆ ಬರುತ್ತಿದ್ದನು. ಈ ವೇಳೆ ರೈಲು ನಿಲ್ಲುವ ಮೊದಲು ಇಳಿಯಲು ಹೋಗಿ ಬ್ಯಾಗ್ ರೈಲಿನ ಹ್ಯಾಂಡಲ್ಗೆ ಸಿಲುಕಿ ಈ ಅವಘಡ ಸಂಭವಿಸಿದೆ.
ಯುವಕನ ದೇಹ ಅರ್ಧ ಭಾಗ ಸಂಪೂರ್ಣ ತುಂಡಾಗಿತ್ತು. ನರಳಾಡುತ್ತಿದ್ದ ಯುವಕನ ಕಂಡು ಮನೆಯವರ ಪೋನ್ ನಂಬರ್ ಪಡೆದು ಮಾಹಿತಿ ನೀಡಲಾಗಿದ್ದು, ಆಸ್ಪತ್ರೆ ರವಾನೆ ವೇಳೆ ಯುವಕ ಸಾವನ್ನಪ್ಪಿದ್ದಾನೆ. ತುಮಕೂರು ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.