ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಕನಸಿನ ಭಾಗವಾಗಿ ಗುರುವಾರ ಸಂಪುಟ ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳಲಾಗಿದೆ. 12,690 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗೆ ಸುರಂಗ ರಸ್ತೆ ನಿರ್ಮಿಸುವ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದೆ. ಅಲ್ಲದೇ, 500 ಕೋಟಿ ರೂ.
ವೆಚ್ಚದಲ್ಲಿ ಬೆಂಗಳೂರಲ್ಲಿ 250 ಅಡಿ ಎತ್ತರದ ಸ್ಕೈಡೆಕ್ ನಿರ್ಮಾಣಕ್ಕೂ ಅನುಮೋದನೆ ನೀಡಿದೆ.
ಅಲ್ಲದೇ, ಮೈಸೂರು ಮಿನರಲ್ ಸಂಸ್ಥೆ ಎ.ವೃಂದದ ಅಧಿಕಾರಿಗಳಿಗೆ 4ನೇ ವೇತನ ಆಯೋಗದ ಶಿಫಾರಸ್ಸಿನಂತೆ ಬಾಕಿ ವೇತನ ಬಿಡುಗಡೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಎಂಎಸ್ಎಂಇ ಕೈಗಾರಿಕೆಗಳಿಗೆ ವೇಗ ನೀಡಲು ಕೈಗಾರಿಕಾ ನಿಯಮಗಳ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದೆ. ಅಲ್ಲದೇ, ಸಂಡೂರಿನಲ್ಲಿರುವ 3,724 ಎಕರೆ ಭೂಮಿಯನ್ನು ಜೆಎಸ್ಡಬ್ಲ್ಯೂ ಸಂಸ್ಥೆಗೆ ಕ್ರಯಪತ್ರ ಮಾಡಿಕೊಡಲು ಸಮ್ಮತಿ ಸೂಚಿಸಿದೆ. ಅಲ್ಲದೇ, ಸಹಕಾರಿ ಸಂಸ್ಥೆಗೆ 1,600 ಕೋಟಿ ರೂ. ಸಾಲ ಪಡೆಯಲು ಖಾತರಿಯನ್ನು ನೀಡಲು ಮುಂದಾಗಿದೆ.
ಏನಿದುಟನೆಲ್ರೋಡ್ಯೋಜನೆ?
* ಹೆಬ್ಬಾಳ – ಸಿಲ್ಕ್ಬೋರ್ಡ್ 18 ಕಿ.ಮೀ ಸುರಂಗ
* ಬೋಟ್ ಶೈಲಿಯ ಸುರಂಗ ಮಾರ್ಗ ರಸ್ತೆ
* ಇದು ಡಬಲ್ ಡೆಕ್ ರಸ್ತೆಗಳನ್ನು ಒಳಗೊಂಡಿರುತ್ತದೆ
* ವಾಹನಗಳಿಗೆ ಐದು ಎಂಟ್ರಿ, ಐದು ಎಕ್ಸಿಟ್ ಪಾಯಿಂಟ್
* ಎಸ್ಟೀಮ್ ಮಾಲ್, ಪ್ಯಾಲೇಸ್ ಗ್ರೌಂಡ್, ಗಾಲ್ಫ್ ಕ್ಲಬ್, ಲಾಲ್ಬಾಗ್, ಸಿಲ್ಕ್ಬೋಡ್ ಬಳಿ ಎಂಟ್ರಿ-ಎಕ್ಸಿಟ್
* ಉದ್ದೇಶಿತ ನಮ್ಮ ಮೆಟ್ರೋಗೆ ಸಮನಾಂತರವಾಗಿ ಸುರಂಗ ರಸ್ತೆ (ಸರ್ಜಾಪುರ ರೋಡ್-ಹೆಬ್ಬಾಳ ಮೆಟ್ರೋ ಯೋಜನೆ)
* ಈ ಯೋಜನೆಗೆ ಭೂಸ್ವಾಧೀನದ ಅಗತ್ಯ ಬೀಳಲ್ಲ
ಮೊದಲು ಈ ಯೋಜನೆಗೆ 8,000 ಕೋಟಿ ರೂ. ಅಂದಾಜು ವೆಚ್ಚ ಎಂದು ಹೇಳಲಾಗಿತ್ತು ಆದರೀಗ ಈ ಮೊತ್ತ ಒಂದೂವರೆ ಪಟ್ಟು ಹೆಚ್ಚಾಗಿದೆ. ಅಂದರೆ 12,690 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದಾಜು ಒಂದು ಕಿಲೋಮೀಟರ್ ಸುರಂಗ ರಸ್ತೆಗೆ ಅಂದಾಜು 705 ಕೋಟಿ ರೂ. ವೆಚ್ಚವಾಗಲಿದೆ.