ಇಸ್ರೇಲ್ನ ಗೂಢಚಾರ ಸಂಸ್ಥೆ ಮೊಸಾದ್ಗೆ ರಹಸ್ಯ ಮಾಹಿತಿ ಒದಗಿಸುತ್ತಿದ್ದ ಆರೋಪದಲ್ಲಿ 7 ಮಂದಿಯನ್ನು ಬಂಧಿಸಿರುವುದಾಗಿ ಟರ್ಕಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಏಳು ಮಂದಿ ಆರೋಪಿಗಳು ಟರ್ಕಿಯ ಕೆಲವು ಪ್ರಮುಖ ವ್ಯಕ್ತಿಗಳು ಮತ್ತು ಸಂಸ್ಥೆಗಳ ಕುರಿತಾದ ಗೌಪ್ಯ ಮಾಹಿತಿಯನ್ನು ಮೊಸಾದ್ಗೆ ರವಾನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ಏಳು ಮಂದಿ ಶಂಕಿತರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ದೇಶದ ಗಡಿಯೊಳಗೆ ರಾಷ್ಟ್ರದ್ರೋಹಿ ಕೃತ್ಯ ನಡೆಸಲು ನಾವು ಆಸ್ಪದ ನೀಡುವುದಿಲ್ಲ ಎಂದು ಟರ್ಕಿಯ ಆಂತರಿಕ ಇಲಾಖೆ ತಿಳಿಸಿದೆ.