ಇತ್ತೀಚೆಗಷ್ಟೇ ಕಿರುತೆರೆ ನಟಿ ಸ್ವಾತಿ ಎಚ್ ವಿ ಗುರು ಹಿರಿಯರು ನಿಶ್ಚಯಿಸಿದ ಹುಡುಗನೊಂದಿಗೆ ಹಸೆಮಣೆ ಏರಿದ್ದರು. ಆದರೆ ಇದು ಸ್ವಾತಿಗೆ ಎರಡನೆ ಮದುವೆ ಎಂಬ ಸುದ್ದಿ ಹರಿದಾಡುತ್ತಿದ್ದು ಈ ಬಗ್ಗೆ ನಟಿ ಸ್ವಾತಿ ಸ್ವಷ್ಟನೆ ನೀಡಿದ್ದಾರೆ.
ಗಟ್ಟಿಮೇಳ, ಗೀತಾ, ಬೆಟ್ಟದ ಹೂ, ಸೇರಿದಂತೆ ಹಲವು ಸೀರಿಯಲ್ ನಟಿಸಿರುವ ನಾಗಾರ್ಜುನ ರವಿ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬೆನ್ನಲ್ಲೇ ಸ್ವಾತಿಗೆ ಇದು ಮೊದಲ ಮದುವೆಯಲ್ಲ, 2ನೇ ಮದುವೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು. ಸಂದರ್ಶನವೊಂದರಲ್ಲಿ 2ನೇ ಮದುವೆ ವದಂತಿ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ನನ್ನ ವೈವಾಹಿಕ ಜೀವನದಲ್ಲಿ ಖುಷಿಯಾಗಿರುವೆ. ನನ್ನ ಸ್ನೇಹಿತನನ್ನು ಮದುವೆ ಮಾಡಿಕೊಂಡಿದ್ದು, ನನ್ನ ಬೆಸ್ಟ್ ಫ್ರೆಂಡ್ ನನ್ನ ಲೈಫ್ ಪಾರ್ಟನರ್ ಆಗಿದ್ದಾರೆ. ನನ್ನ ಬಗ್ಗೆ ಸಂಪೂರ್ಣವಾಗಿ ಗೊತ್ತಿರುವ ಕಾರಣ ಎಲ್ಲವೂ ಸ್ಮೂತ್ ಆಗಿ ನಡೆಯುತ್ತಿದೆ ಎಂದು ಸ್ವಾತಿ ಹೇಳಿದ್ದಾರೆ.
ನನ್ನ ಗಂಡನ ಮನೆ ಕಡೆ ತುಂಬಾ ತಪ್ಪು ತಿಳಿದುಕೊಂಡಿದ್ದು, ಹುಡುಗಿಗೆ ಇದು ಎರಡನೇ ಮದುವೆ ಮೂರನೇ ಮದುವೆ ನಾ ಎಂದು ಕೇಳಿದರು. ಆ ನಂತರ ಅದು ಸೀರಿಯಲ್ ಮದುವೆ ಎಂದು ಕ್ಲಾರಿಟಿ ಕೊಟ್ಟರು. ಮದುವೆ ಫೋಟೋ ಹಾಕಿದಾಗ ಅನೇಕರು ಎರಡನೇ ಮದುವೆ ಎನ್ನುತ್ತಿದ್ದರು ಹೀಗಾಗಿ ಅನೇಕರಿಗೆ ಕ್ಲಾರಿಟಿ ಕೊಡಬೇಕು ಅನಿಸಿತು. ಸೀರಿಯಲ್ನಲ್ಲಿ ತಾಯಿ ಪಾತ್ರ ಮಾಡ್ತೀನಿ, ಆದರೆ ರಿಯಲ್ ಲೈಫ್ನಲ್ಲಿ ನನಗೆ ಅಷ್ಟೋಂದು ಮದುವೆ ಆಗಿಲ್ಲ. ಇತ್ತೀಚಿಗೆ ನನ್ನ ಮದುವೆ ಆಗಿದ್ದು, ಇದು ನನ್ನ ಮೊದಲನೇ ಮದುವೆ ಎಂದು ಸ್ಪಷ್ಟನೆ ನೀಡಿದ್ದಾರೆ.