ಬೆಂಗಳೂರು:- ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಣುಕಾ ಸ್ವಾಮಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಅವರು ಈಗ ಪೊಲೀಸರಿಗೆ ವರದಿ ನೀಡಿದ್ದಾರೆ. ರೇಣುಕಾ ಸ್ವಾಮಿ ದೇಹಕ್ಕೆ ಹಲವಾರು ಗಂಭೀರ ಹೊಡೆತಗಳು ಬಿದ್ದಿದ್ದವು. ಈ ಏಟುಗಳಿಂದ ರೇಣುಕಾ ಸ್ವಾಮಿ ನಲುಗಿ ಹೋಗಿದ್ದರು.
ನೋವ ತಾಳಲಾರದೆ ಹಂತ ಹಂತವಾಗಿ ಅವರು ಕೊನೆಯುಸಿರೆಳೆದಿದ್ದಾರೆ. ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ನಿರಂತರವಾಗಿ ಹಲ್ಲೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪವಿತ್ರಾ ಗೌಡ ಸ್ನೇಹಿತೆಯ ಪತಿಯಿಂದಲೇ ರೇಣುಕಾ ಸ್ವಾಮಿಯ ಮರಣೋತ್ತರ ಪರೀಕ್ಷೆ ನಡೆದಿದೆ ಎಂದು ವರದಿ ಆಗಿತ್ತು. ಅವರು ಕೂಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ನಡೆಸಿ ಸಹಿ ಮಾಡಿದ ವರದಿಯಲ್ಲಿ ಅವರ ಹೆಸರಿಲ್ಲ.