ಇಸ್ಲಾಮಾಬಾದ್: ರಿಮೋಟ್ ಕಂಟ್ರೋಲ್ ಬಾಂಬ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾದ ಬಜೌರ್ ಜಿಲ್ಲೆಯಲ್ಲಿ ಸಂಭವಿಸಿದೆ.
ಸ್ಫೋಟವು ಪಿಕಪ್ ವ್ಯಾನ್ಗೆ ಅಪ್ಪಳಿಸಿದ್ದು ಪರಿಣಾಮವಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಮತ್ತು ವಾಹನದಲ್ಲಿ ಪ್ರಯಾಣಿಸುತ್ತಿದ್ದ ಗುತ್ತಿಗೆದಾರನಿಗೆ ಗಾಯಗಳಾಗಿವೆ ಎಂದು ಬಜೌರ್ ಉಪ ಪೊಲೀಸ್ ವರಿಷ್ಠಾಧಿಕಾರಿ ಸತ್ತಾರ್ ಖಾನ್ ತಿಳಿಸಿದ್ದಾರೆ.
ಸಂತ್ರಸ್ತರು ಬಜಾರ್ನ ಭದ್ರತಾ ಚೆಕ್ ಪೋಸ್ಟ್ಗೆ ವಾಹನದಲ್ಲಿ ಮರಳನ್ನು ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದೆ. ಮೃತದೇಹ ಮತ್ತು ಗಾಯಾಳುಗಳನ್ನು ಬಜಾರ್ನ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಾಯಗೊಂಡಿದ್ದ ಗುತ್ತಿಗೆದಾರ ಸಾವನ್ನಪ್ಪಿದ್ದಾನೆ ಎಂದು ಡಿಎಸ್ಪಿ ತಿಳಿಸಿದ್ದಾರೆ.
ಕೆಪಿಯ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಚೆಹ್ಕನ್ ಪ್ರದೇಶದಲ್ಲಿ ನಡೆದ ಆತ್ಮಹತ್ಯಾ ಬಾಂಬರ್ ಪ್ರಕರಣದ ಒಂದು ವಾರದ ನಂತರ ಈ ಘಟನೆ ನಡೆದಿದೆ. ಆ ದಾಳಿಯಲ್ಲಿ ಕನಿಷ್ಠ 22 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.
ಈ ಸ್ಫೋಟವು ಆತ್ಮಹತ್ಯಾ ದಾಳಿಯಾಗಿದೆ ಎಂದು ಅಧಿಕೃತ ಮೂಲಗಳು ಬಹಿರಂಗಪಡಿಸಿವೆ. ಇದರಲ್ಲಿ ಮೋಟಾರು ಸೈಕಲ್ನಲ್ಲಿ ಸವಾರಿ ಮಾಡುತ್ತಿದ್ದ ಅಪರಿಚಿತ ಆತ್ಮಹತ್ಯಾ ಬಾಂಬರ್ ಭದ್ರತಾ ಪಡೆಗಳ ಬೆಂಗಾವಲು ಪಡೆಯ ಮೇಲೆ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.