ಕಲಬುರಗಿ: ಈ ಹಿಂದೆ ಕೌಟುಂಬಿಕ ವಿಚಾರವಾಗಿ ಸುದ್ದಿಯಾಗಿದ್ದ IPS ಅಧಿಕಾರಿ ಅರುಣ್ ರಂಗರಾಜನ್ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ, ಮಹಿಳಾ ASI ಜೊತೆ ರಂಗರಾಜನ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ, ಸಂತ್ರಸ್ಥ ASI ಪತಿ IPS ಅಧಿಕಾರಿ ಮತ್ತು ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ
ಮಹಿಳಾ ಎಎಸ್ ಐ ಪತಿ ಹೆಡ್ ಕಾನ್ಸಟೇಬಲ್ ಕಂಟೆಪ್ಪನ ಕೈಯಲ್ಲಿ ಅರುಣ್ ರಂಗರಾಜನ್ ಮತ್ತು ಆಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.ಕಲಬುರ್ಗಿ ನಗರದ ಐವಾನ್ ಶಾಹೀ ಬಡವಾಣೆಯ ಪಿಡಬ್ಲುಡಿ ಕ್ವಾಟರ್ಸ್ ನಲ್ಲಿ ಅನೈತೀಕ ಸಂಬಂಧದಲ್ಲಿ ತೋಡಗಿದ್ದ ಇಬ್ಬರು ಸಿಕ್ಕಿಕೊಂಡಿದ್ದಾರೆ. ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಗೆ ನೀಡಿದ್ದ ಪಿಡಬ್ಲುಡಿ ಕ್ವಾಟರ್ಸ್ ನಲ್ಲೆ ಇಬ್ಬರು ಸರಸ ಸಲ್ಲಾಪದಲ್ಲಿ ತೊಡಗಿದ್ದರು.
ಅರೆ ಬೆತ್ತಲೆಯಾಗಿ ಮಲಗಿದ್ದ ಇಬ್ಬರನ್ನು ಕಂಡು ಎಎಸ್ ಐ ಪತಿ ಕಂಟೆಪ್ಪ ಶಾಕ್ ಆಗಿದ್ದಾನೆ. ಈ ವೇಳೆ ಹೆಂಡತಿ ಮತ್ತು ಐಪಿಎಸ್ ಅಧಿಕಾರಿ ಅರೆ ಬೆತ್ತಲೆಯಾಗಿ ಮಲಗಿರುವ ವಿಡಿಯೋ ಮಾಡಿದ್ದನು. ವಿಡಿಯೋ ಮಾಡಿದ ಹಿನ್ನಲೆ ಪತ್ನಿ ಹಾಗೂ ಐಪಿಎಸ್ ಅಧಿಕಾರಿ ಕಂಟೆಪ್ಪನನ್ನ ಹೊಡೆದು ಕೊಲೆ ಮಾಡುವ ಬೇದರಿಕೆ ಹಾಕಿದರು.
ಕಳೆದ ಹಲವು ತಿಂಗಳಿನಿಂದಲು ಅನೈತಿಕ ಸಂಬಂಧ ಹೊಂದಿರುವ ಮಹಿಳಾ ಎ ಎಸ್ ಐ ಮತ್ತು ಐಪಿಎಸ್ ಅಧಿಕಾರಿ ಈಗ ಸಿಕ್ಕಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಹಿಳಾ ಎ ಎಸ್ ಐ ಮತ್ತು ಅರುಣ್ ರಂಗರಾಜನ್ ಐ ಎಸ್ ಡಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಇಬ್ಬರು ಅಕ್ರಮ ಸಂಬಂಧದಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದ ಹೆಡ್ ಕಾನ್ಸಟೇಬಲ್ ಕಂಟೆಪ್ಪ ಮತ್ತೊಂದು ಬಾರಿ ಹಿಡಿದಿದ್ದಾನೆ.
ಈ ಹಿಂದೆಯು ಎರಡು ಮೂರು ಬಾರಿ ತಿಳಿ ಹೇಳಿದ್ರು ಬದಲಾಗದ ಪತ್ನಿ ಮತ್ತು ಐಪಿಎಸ್ ಅಧಿಕಾರಿಯಿಂದ ಕಂಟೆಪ್ಪ ರೋಸಿ ಹೋಗಿದ್ದನು. ಅಧಿಕಾರ ದುರುಪಯೋಗ ಪಡಿಸಿಕೊಂಡು ಮಹಿಳಾ ಎ ಎಸ್ ಐ ಜೊತೆ ನಿರಂತರವಾಗಿ ಅನೈತಿಕ ಸಂಭಂಧ ಹೊಂದಿದ ಐಪಿಎಸ್ ಅಧಿಕಾರಿ ಕಾಮ ಪುರಾಟ ಬಯಲಿಗೆ ಬಂದಿದೆ.ನಿನ್ನೆಯು ಕೂಡ ಐಪಿಎಸ್ ಅಧಿಕಾರಿ ಮನೆಯಲ್ಲಿ ಅನೈತಿಕ ಸಂಬಂಧದಲ್ಲಿ ತೊಡಗಿದ್ದಾಗ ಎಂಟ್ರಿ ಕೊಟ್ಟ ಹೆಡ್ ಕಾನ್ಸಟೇಬಲ್ ಗಂಡ ಇಬ್ಬರನ್ನು ನೋಡಿ ದಿಗ್ಬಾಂತ್ರರಾಗಿದ್ದಾರೆ.ಮನೆಯೊಳಗೆ ಎಂಟ್ರಿ ಕೊಟ್ಟರೆ ಕೊಲೆ ಮಾಡುವ ಬೇದರಿಕೆ ಹಾಕಿದ್ದ ಐಪಿಎಸ್ ಅಧಿಕಾರಿ ವರ್ತನೆಗೆ ಕಂಟೆಪ್ಪ ಕಿಡಿ ಕಿಡಿಯಾಗಿದ್ದಾನೆ.ಐಪಿಎಸ್ ಅಧಿಕಾರಿ ಬೇದರಿಕೆ ಹಿನ್ನಲೆ ಮನೆಯ ಸುತ್ತಲೂ ಅಡ್ಡಾಡಿ ವಿಡಿಯೋ ಮಾಡಿದ್ದಾನೆ. ಕೊನೆಗೆ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಮತ್ತು ಪತ್ನಿ ವಿರುದ್ದ ಸ್ಟೇಷನ್ ಬಜಾರ್ಪೋಲಿಸ್ ಸ್ಟೇಷನ್ ನಲ್ಲಿ ದೂರು ಕೂಡ ದಾಖಲಿಸಿದ್ದಾನೆ.
ಆರೋಪ ಅಲ್ಲಗೆಳೆದ IPS ಅಧಿಕಾರಿ:
ಯಾರ ಹೆಂಡತಿಯನ್ನು ಯಾರು ಕೂಡಿ ಹಾಕೋಕೆ ಆಗೋದಿಲ್ಲ. ತನ್ನ ಹೆಂಡತಿಯನ್ನು ತನ್ನ ಮನೆಯಲ್ಲಿ ಇಟ್ಟಕೊಳ್ಳೊದು ಒಬ್ಬ ಗಂಡನ ಜವಾಬ್ದಾರಿ.ಅದನ್ನು ಅವನು ಇಟ್ಟುಕೊಳ್ಳಲಿಲ್ಲಾ ಅಂದ್ರೆ ಅವಳು ಎಲ್ಲಿ ಬೇಕು ಅಲ್ಲಿ ಹೋಗಿ ಸೇರ್ತಾಳೆ. ನನ್ನ ಮನೆಯಲ್ಲಿ ನೂರು ಜನ ಇರ್ತಾರೆ ಅದನ್ನೆಲ್ಲಾ ನಾನು ಹೇಳೊಕೆ ಆಗುತ್ತಾ. ಮನೆಯ ಬಾಡಿಗೆ ಕಟ್ಟುವವನು ನಾನು ಯಾರು ಬೇಕಾದ್ರು ಇರ್ತಾರೆ ನನ್ನ ಮನೆಯಲ್ಲಿ. ಅವನ ಹೆಂಡತಿ ಅವನ ಮನೆಯಲ್ಲಿ ಇಲ್ಲ ಅಂದ್ರೆ ಅವನು ಎಲ್ಲಿ ಹೋಗಿ ಹುಡುಕಬೇಕು ಅಲ್ಲಿ ಹುಡಕಬೇಕು ಎಂದ ಅರುಣ್ ರಂಗರಾಜನ್ ಕಂಟೆಪ್ಪನಿಗೆ ತಿರುಗೇಟು ಕೊಟ್ಟಿದ್ದಾನೆ.