ಬೇಸಿಗೆಯ ಉತ್ಸಾಹವನ್ನು ಹಳ್ಳಿಗಾಡಿನ ಆಟಗಳು ಮತ್ತು ಸಾಂಪ್ರದಾಯಿಕ ಕಲಾ ಅನುಭವಗಳೊಂದಿಗೆ ಪೋಷಕರು, ಮಕ್ಕಳು ಮತ್ತು ಇಡೀ ಕುಟುಂಬಕ್ಕೆ ಸಮಾನವಾಗಿ ಆಚರಿಸಲು ಅನುವು ಮಾಡಿಕೊಡುವ ಉದ್ಭವಹ ಉತ್ಸವದ ಎರಡನೇ ಆವೃತ್ತಿ ಏಪ್ರಿಲ್ 7ರಂದು ಬೆಳಿಗ್ಗೆ 10 ರಿಂದ ಸಂಜೆ 7ರವರೆಗೆ ಕೆಂಗೇರಿ ಬಳಿಯ ರಮಣೀಯ ‘ಉದ್ಭವ ಕ್ಯಾಂಪಸ್’ನಲ್ಲಿ (ಮುದ್ದಯ್ಯನಪಾಳ್ಯ, ರಾಮೋಹಳ್ಳಿ ಪೋಸ್ಟ್) ಹಮ್ಮಿಕೊಳ್ಳಲಾಗಿದೆ.
ಉತ್ಸವವು ನಗರದ ಜೀವನದ ಜಂಜಾಟದಿಂದ ದೂರವಿರುವ ಮಕ್ಕಳ ಸಂವೇದನಾ ಅನುಭವಗಳನ್ನು ಉತ್ಕøಷ್ಟಗೊಳಿಸುವ ಸರಳ ಆಟಗಳ ಸಂತೋಷವನ್ನು ಮರಳಿ ತರುವ ಗುರಿಯನ್ನು ಹೊಂದಿದೆ.
ಉದ್ಭವಃ ಒಂದು ಶೈಕ್ಷಣಿಕ ಟ್ರಸ್ಟ್ ಮತ್ತು ಎನ್ಜಿಓ ಆಗಿದ್ದು, ನಿಗದಿತ ಶುಲ್ಕವನ್ನು ಸೂಚಿಸುವುದಿಲ್ಲ. ಪೆÇೀಷಕರು, ನಿಧಿಸಂಗ್ರಹಣೆ ಈವೆಂಟ್/ಚಟುವಟಿಕೆಗಳು ಮತ್ತು ಸಿಎಸ್ಸಾರ್ ಕೊಡುಗೆಗಳಿಂದ ಬರುವ ದಾನದ (ನಿಸ್ವಾರ್ಥ ದೇಣಿಗೆ) ಮೇಲೆ ನಮ್ಮ ಶಿಕ್ಷಣ ಕೇಂದ್ರಿತ ಸಮುದಾಯ ಉಪಕ್ರಮವನ್ನು ನಡೆಸುತ್ತೇವೆ.
ಅವರ ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಶಿಕ್ಷಣವನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡಬೇಕು ಎಂದು ನಾವು ನಂಬುತ್ತೇವೆ. ಶಿಕ್ಷಣ, ಆಹಾರ ಮತ್ತು ಔಷಧವು ಸಮಾಜಕ್ಕೆ ನೀಡುವ ಸೇವೆಯಾಗಬೇಕು ಮತ್ತು ವ್ಯಾಪಾರದ ಅವಕಾಶವಾಗಿ ನೋಡಬಾರದು ಎಂದು ಸೂಚಿಸುವ ನಮ್ಮ ಧಾರ್ಮಿಕ ತತ್ವಗಳಿಗೆ ಇದು ಅನುಗುಣವಾಗಿದೆ ಎಂದು ಪ್ರಕಟಣೆ ಹೇಳಿದೆ.
ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಶಿಬಿರ ಉಚಿತವಾಗಿದ್ದು, ಉಳಿದವರಿಗೆ ತಲಾ 750 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ವಿವರಗಳಿಗೆ 7892557881 ಅಥವಾ 7892914963 ಸಂಪರ್ಕಿಸಬಹುದು.
ಕೇಸರು ಗದ್ದೆ (ಕೆಸರು ಆಟ), ಹಸುಗಳೊಂದಿಗೆ ಇರುವುದು, ಬೊಂಬೆ ಪ್ರದರ್ಶನ, ನಮ್ಮ ನೈಸರ್ಗಿಕ ಕೊಳದಲ್ಲಿ ನೀರಿನ ಆಟ
ಮ್ಯಾಕ್ರೇಮ್ ತಯಾರಿಕೆ, ಸೀಡ್ ಬಾಲ್/ಸಾವಯವ ಕೃಷಿ, ಫೈರ್ ವಾಕ್ ಸಾಹಸ ಮತ್ತಿತರ ವೈಶಿಷ್ಟ್ಯಗಳಿವೆ ಎಂದು ಪ್ರಕಟಣೆ ಹೇಳಿದೆ.