ಯುಕೆ ಸಂಸತ್ತಿನಲ್ಲಿ ಭಾರತೀಯ ಮೂಲದ ಭಾರತೀಯ ಮೂಲದ ಶಿವಾನಿ ರಾಜಾ ಅವರು ಭಗವದ್ಗೀತೆಯನ್ನು ಹಿಡಿದುಕೊಂಡು ಪ್ರಮಾಣ ವಚನ ಸ್ವೀಕರಿಸಿ ಭಾರತೀಯರ ಮೆಚ್ಚುಗೆಗೆ ಪಾತ್ರರಾದರು.
29ವರ್ಷದ ಶಿವಾನಿ ಮೂಲತಃ ಗುಜರಾತ್ ನವರಾಗಿದ್ದು ಯುಕೆಯಲ್ಲಿ ಉದ್ಯಮಿಯಾಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಲೀಸೆಸ್ಟರ್ ಪೂರ್ವ ಕ್ಷೇತ್ರದಿಂದ ಕನ್ಸರ್ವೇಟಿವ್ ಪಕ್ಷದಿಂದ ಕಣಕ್ಕೆ ಇಳಿದು ಐತಿಹಾಸಿಕ ಗೆಲುವು ಸಾಧಿಸಿದ್ದರು. 27 ವರ್ಷಗಳಿಂದ ಈ ಕ್ಷೇತ್ರ ಲೇಬರ್ ಪಕ್ಷದ ಹಿಡಿತದಲ್ಲಿತ್ತು. ಆದರೆ ಶಿವಾನಿ ಅವರು ಭಾರತೀಯ ಮೂಲದ ರಾಜೇಶ್ ಅಗರ್ವಾಲ್ ಅವರನ್ನು ಸೋಲಿಸಿ ಸಂಸತ್ತಿಗೆ ಆಯ್ಕೆ ಆಗಿದ್ದಾರೆ.
ಈ ಬಗ್ಗೆ X ನಲ್ಲಿ ರಾಜಾ ಪ್ರಮಾಣವಚನ ಸಮಾರಂಭದ ವೀಡಿಯೊವನ್ನು ಪೋಸ್ಟ್ ಮಾಡಿರುವ ಶಿವಾನಿ, “ಲೀಸೆಸ್ಟರ್ ಪೂರ್ವವನ್ನು ಪ್ರತಿನಿಧಿಸಲು ಇಂದು ಸಂಸತ್ತಿಗೆ ಪ್ರಮಾಣವಚನ ಸ್ವೀಕರಿಸಿರುವುದು ಗೌರವವಾಗಿದೆ” ” ಗೀತಾದಲ್ಲಿ ಹಿಸ್ ಮೆಜೆಸ್ಟಿ ಕಿಂಗ್ ಚಾರ್ಲ್ಸ್ಗೆ ನನ್ನ ನಿಷ್ಠೆಯನ್ನು ಪ್ರತಿಜ್ಞೆ ಮಾಡಲು ನಾನು ನಿಜವಾಗಿಯೂ ಹೆಮ್ಮೆಪಡುತ್ತೇನೆ ” ಎಂದು ಬರೆದುಕೊಂಡಿದ್ದಾರೆ.
2022ರ ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆದ ಟಿ20 ಏಷ್ಯಾ ಕಪ್ ಪಂದ್ಯದ ನಂತರ ಭಾರತೀಯ ಹಿಂದೂ ಸಮುದಾಯ ಮತ್ತು ಮುಸ್ಲಿಮರ ನಡುವೆ ಲೀಸೆಸ್ಟರ್ ಸಿಟಿಯ ದೊಡ್ಡ ಸಂಘರ್ಷವೇ ನಡೆದಿತ್ತು. ಶಿವಾನಿ ರಾಜಾ 14,526 ಮತಗಳನ್ನು ಪಡೆದರೆ ಲಂಡನ್ನ ಮಾಜಿ ಉಪಮೇಯರ್ ಅಗರವಾಲ್ ಅವರನ್ನು 10,100 ಮತಗಳನ್ನು ಪಡೆದರು.
ಯುನೈಟೆಡ್ ಕಿಂಗ್ಡಂನಲ್ಲಿ ಜುಲೈ 4 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶಿವಾನಿ ಅವರನ್ನು ಹೊರತುಪಡಿಸಿ 27 ಭಾರತೀಯ ಮೂಲದ ಸದಸ್ಯರು ಹೌಸ್ ಆಫ್ ಕಾಮನ್ಸ್ಗೆ ಆಯ್ಕೆಯಾಗಿದ್ದಾರೆ.