ಕಳೆದ ವರ್ಷ ದೆವ್ವದ ಜೊತೆ ಮದುವೆಯಾಗಿದ್ದ ಮಹಿಳೆ ಮದುವೆಯಾದ ಒಂದು ವರ್ಷದೊಳಗೆ ವಿಚ್ಚೇಧನ ಪಡೆಯಲು ಬಯಸಿದ್ದಾಳೆ. ಮದುವೆಯಾದ ಒಂದು ವರ್ಷದೊಳಗೆ ಮಹಿಳೆ ಗಂಡನೊಂದಿಗೆ ಕೋಪಿಸಿಕೊಂಡಿದ್ದು ಅವರನ್ನು ಬಿಡಲು ಪ್ರಯತ್ನಿಸುತ್ತಿದ್ದಾಳಂತೆ. ಆದರೆ ಅಷ್ಟು ಸುಲಭವಾಗಿ ಹೇಗೆ ಬಿಡುತ್ತಾನೆ, ಅದಕ್ಕಾಗಿ ತಂತ್ರ-ಮಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ರಾಕರ್ ಬ್ರೋಕಾರ್ಡ್ ಎಂಬ ಮಹಿಳೆ ದೆವ್ವವನ್ನು ಪ್ರೀತಿಸಿ ಮದುವೆಯಾಗಿದ್ದಳು. ಬ್ರೋಕಾರ್ಡೊ ಮದುವೆಯಾಗುವ ಭೂತಕ್ಕೆ ಎಡ್ವರ್ಡೊ ಎಂದು ಹೆಸರಿಡಲಾಗಿದ್ದು, ದೆವ್ವ ತನ್ನ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳದ ಕಾರಣ ಈಗ ಇಬ್ಬರ ಮಧ್ಯೆ ಸಮಸ್ಯೆ ಶುರುವಾಗಿದೆ.
ಅವನು ಇದ್ದಕ್ಕಿದ್ದಂತೆ ತಡರಾತ್ರಿ ಮಲಗುವ ಕೋಣೆಗೆ ಬರುತ್ತಾನೆ ಮತ್ತು ಯಾವಾಗ ಬೇಕಾದರೂ ಹೋಗುತ್ತಾನೆ. ಮೊದಲಿದ್ದಂಗೆ ಇರಲು ಸಾಧ್ಯವಿಲ್ಲ. ಅವನಿಗೆ ಮದುವೆಯಾಗಿದೆ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾಳೆ.
38 ವರ್ಷದ ಬ್ರೋಕಾರ್ಡ್ ಮದುವೆಯಾದ ಪ್ರೇತ ವಿಕ್ಟೋರಿಯನ್ ಸೈನಿಕ. ಮಹಿಳೆ ಬ್ರೋಕಾರ್ಡ್ ಗಾಯಕಿ. ಅವಳು ಎಡ್ವರ್ಡೊನ ಪ್ರೇತವನ್ನು ಆಳವಾಗಿ ಪ್ರೀತಿಸುತ್ತಿದ್ದಳು. ಎಡ್ವರ್ಡೊ ಅಂದರೆ ದೆವ್ವ ಕೂಡ ಈಕೆಯನ್ನು ಪ್ರೀತಿಸುತ್ತಾನಂತೆ.
ಎಡ್ವರ್ಡೊ ರಹಸ್ಯ ಮಾರ್ಗಗಳನ್ನು ಬಳಸಿಕೊಂಡು ಮಹಿಳೆಗೆ ಸಂದೇಶವನ್ನು ಕಳುಹಿಸುತ್ತಾನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ಮಹಿಳೆಯ ದಿಂಬಿನ ಬಳಿ ಉಂಗುರವನ್ನು ಇರಿಸುವ ಮೂಲಕ ದೆವ್ವ ಪ್ರೀತಿಯನ್ನು ಪ್ರಸ್ತಾಪಿಸಿತ್ತು ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಇದಾದ ಬಳಿಕ ತನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದೀಯಾ ಎಂದು ಉಗಿಯಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು ಕಳುಹಿಸಿತ್ತಂತೆ, ಅದಕ್ಕೆ ಹೌದು ಎನ್ನುವ ಮೂಲಕ ಮಹಿಳೆ ಪ್ರೀತಿಗೆ ಒಪ್ಪಿಗೆ ನೀಡಿದ್ದಳು ಎಂದು ಹೇಳಿಕೊಂಡಿದ್ದಾಳೆ.
ಸ್ನಾನ ಮಾಡುವಾಗ ಬಿಸಿನೀರಿನ ಹಬೆಯಲ್ಲಿ ಎಡ್ವರ್ಡೊ ಸಂದೇಶ ಬರೆಯುತ್ತಾನಂತೆ. ಅದಕ್ಕೆ ಮಹಿಳೆ ಅಲ್ಲಿಯೇ ಉತ್ತರ ನೀಡುತ್ತಾಳಂತೆ. ಇದಲ್ಲದೆ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಬೀಳಿಸುವ ಮೂಲಕ ತನ್ನ ಉಪಸ್ಥಿತಿಯನ್ನು ಆತ ತೋರಿಸುತ್ತಾನಂತೆ. ನಂತ್ರ ಪಾತ್ರೆಗಳ ಶಬ್ಧದ ಮೂಲಕವೇ ಇಬ್ಬರ ಮಾತುಕತೆ ನಡೆಸುತ್ತೇವೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.