ನವದೆಹಲಿ: ಉಕ್ರೇನ್ನ ವಿದೇಶಾಂಗ ವ್ಯವಹಾರಗಳ ಉಪ ಸಚಿವೆ ಎಮಿನಿ ಝಪರೋವಾ ಅವರು ಇಂದಿನಿಂದ ನಾಲ್ಕು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ.
ಕಳೆದ ವರ್ಷ ಉಕ್ರೇನ್ ಮೇಲೆ ರಷ್ಯಾವು ಯುದ್ಧ ಸಾರಿತ್ತು. ಈ ಬೆಳವಣಿಗೆ ನಡುವೆ ಎಮಿನಿ ಝಪರೋವಾ ಇದೇ ಮೊದಲ ಬಾರಿಗೆ ಭಾರತಕ್ಕೆ ಅಧಿಕೃತ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಎಮಿನಿ ಅವರು ಪ್ರವಾಸದ ಅವಧಿಯಲ್ಲಿ ಭಾರತದ ವಿದೇಶಾಂಗ ಸಚಿವಾಲಯದ (ಪಶ್ಚಿಮ) ಕಾರ್ಯದರ್ಶಿ ಸಂಜಯ್ ವರ್ಮಾ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಉಕ್ರೇನ್ಗೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡುವ ನಿರೀಕ್ಷೆಯೂ ಇದೆ.
‘ಎಮಿನಿ ಅವರು ಇಂದಿನಿಂದ 12ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದು, ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸುವ ದಿಸೆಯಲ್ಲಿ ಹಾಗೂ ಉಕ್ರೇನ್ನ ಸದ್ಯದ ಪರಿಸ್ಥಿತಿ ಕುರಿತು ಅವರು ಸಂಜಯ್ ವರ್ಮಾ ಜೊತೆ ಚರ್ಚೆ ನಡೆಸಲಿದ್ದಾರೆ.