ಚುನಾವಣೆಗೆ ಇನ್ನು ಬೆರಳೆಣಿಕೆ ದಿನಗಳು ಬಾಕಿ ಉಳಿದಿವೆ. ಎಲ್ಲ ಪಕ್ಷದ ಅಭ್ಯರ್ಥಿಗಳು ಬೈಕ್ ರ್ಯಾಲಿಗಳ ಮಾಡುವ ಮೂಲಕ ಮತ ಭೇಟೆ ಮಾಡುತ್ತಿದ್ದಾರೆ.ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಗೌಡ ಇಂದು ತಮ್ಮ ಕ್ಷೇತ್ರದ ಅರಕೆರೆ ವಾರ್ಡನ ಆಂಜನೇಯ ದೇವಾಸ್ಥಾನದಲ್ಲಿ ಪೂಜೆ ಮಾಡಿ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.ಅರಕೆರೆಯಿಂದ ಹೊರಟ ಬೈಕ್ ರ್ಯಾಲಿ ಬಿ ಟಿ ಎಸ್ ಬಡಾವಣೆ ಹುಳಿಮಾವು ನ್ಯಾನಪ್ಪಹಳ್ಳಿ ಮೂಲಕ ಬೊಮ್ಮನ ಹಳ್ಳಿ ತಲುಪಿದರು.
ಇದೆ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಗೌಡ ಮೂರು ದಿನಗಳಿಂದ ಸುರಿಯತ್ತಿರುವ ಮಳೆಗೆ ಕ್ಷೇತ್ರದಲ್ಲಿ ಜನರು ಪರದಾಡುವಂತ್ತಾಗಿದ್ದು ಮಾಜಿ ಶಾಸಕರು ಮಾಡಿರುವ ಅಭಿವೃದ್ದಿ ಮಂತ್ರಗಳು ಯಾವುದು ಕೆಲಸ ಮಾಡಿಲ್ಲ ಇನ್ನು ಮುಂದೆ ಯಾವುದೆ ಮಂತ್ರಗಳು ನಡೆಯುವುದಿಲ್ಲ ಅವರ ಸರ್ಕಾರ ಇದ್ದಾಗ ತಮಗೆ ಬೇಕಾದ ಸ್ನೇಹಿತರಿಗೆ ಸಂಬಂಧಿಕರಿಗೆ ಕಾಂಟ್ರಾಕ್ಟ್ ಗಳನ್ನು ಕೊಟ್ಟು ನಮ್ಮ ಪಕ್ಷದ ಕಾರ್ಯಕರ್ತರು ಪ್ರೆಶ್ನೆ ಮಾಡಲು ಹೋದಾಗ ಅವರನ್ನು ಹೊಡೆದು ಬೆದರಿಕೆ ಹಾಕಿ ಪೋಲಿಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ .ಇನ್ನು ಮುಂದೆ ಇವರ ಯಾವುದೆ ಆಟ ನಡೆಯುವುದಿಲ್ಲ ಎಂದು ವಾಗ್ದಾಳಿ ಮಾಡಿದರು.