ಡಾ ಜಿ ಪರಮೇಶ್ ರ ಅವರು ಭಾರತೀಯ ರಾಜಕಾರಣಿ ಮತ್ತು ಕರ್ನಾಟಕದ 7 ನೇ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೊರಟಗೆರೆ ಕ್ಷೇತ್ರದಿಂದ ಐಎನ್ಸಿ ಪಕ್ಷದ ಅಭ್ಯರ್ಥಿಯಾಗಿ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನವೀಕರಣದ ಪ್ರಕಾರ, ಪರಮೇಶ್ವರ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಂದಿದ್ದಾರೆ ಇವರು 1951 ಆಗಸ್ಟ್ 6ರಂದು ತುಮಕೂರು ತಾಲೂಕಿನ ಗೊಲ್ಲಳ್ಳಿಯಲ್ಲಿ ತಂದೆ-ಗಂಗಾಧರಯ್ಯ, ತಾಯಿ-ಗಂಗಮಾಳಮ್ಮ ಮಗನಾಗಿ ಜನಿಸಿದ್ದು. ಬಳಿಕ ಪ್ರಾರಂಭಿಕ ವಿದ್ಯಾಭ್ಯಾಸದಿಂದ ಪಿಯುಸಿವರೆಗೆ ತಮ್ಮ ಸ್ವಂತ ಊರಿನಲ್ಲಿಯೇ ಓದಿದ್ದಾರೆ. ಆನಂತರ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಕೃಷಿಯಲ್ಲಿ ಎಂಎಸ್ಸಿ ಪದವಿ ಮುಗಿಸಿ, ನಂತರ ಅದೇ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸುತ್ತಾರೆ. ಬಳಿಕ ಸಸ್ಯ ಶರೀರಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡಿ, ನಂತರ, ಪರಮೇಶ್ವರ ಅವರು ವಿದೇಶಕ್ಕೆ ಹೋದರು. ಅಲ್ಲಿ ಸಸ್ಯ ಶರೀರಶಾಸ್ತ್ರದಲ್ಲಿ ಅಡಿಲೇಡ್ ವಿಶ್ವವಿದ್ಯಾಲಯದ ವೈಟ್ ಕೃಷಿ ಸಂಶೋಧನಾ ಕೇಂದ್ರದಿಂದ ಪಿಎಚ್ಡಿ ಪದವಿ ಪಡೆದರು.
ಡಾ ಜಿ ಪರಮೇಶ್ವರ ಅವರ ಬಗ್ಗೆ ಕುತೂಹಲಕಾರಿ ಸಂಗತಿಗಳು :
ಅವರು ಚಿಕ್ಕ ವಯಸ್ಸಿನಲ್ಲೇ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಭಾರತ) ಸೇರಿದರು. ಅವರು ವಿಶೇಷವಾಗಿ ಕ್ರೀಡಾಪಟುವಾಗಿದ್ದರು, ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 100 ಮೀಟರ್ ಓಟದ 10.9 ಸೆಕೆಂಡುಗಳ ದಾಖಲೆಯನ್ನು ಹೊಂದಿದ್ದಾರೆ. ಅವರು ಅಂತರ ಕಾಲೇಜು/ವಿಶ್ವವಿದ್ಯಾಲಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕಾಲೇಜು ಮತ್ತು ಭಾರತೀಯ ಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದರು. ಪರಮೇಶ್ವರ ಅವರು ಆಸ್ಟ್ರೇಲಿಯಾದಿಂದ ಮರಳಿ ಬಂದಾಗ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಡಳಿತಾಧಿಕಾರಿಯಾಗಿದ್ದರು.
ಡಾ ಜಿ ಪರಮೇಶ್ವರ ಸಾಧನೆಗಳು ಮಾಸ್ಟರ್ಸ್ ಸಮಯದಲ್ಲಿ ಭಾರತ ಸರ್ಕಾರದ ವಿದ್ಯಾರ್ಥಿವೇತನ, 1978. ಭಾರತ ಸರ್ಕಾರದ ಸಾಗರೋತ್ತರ ವಿದ್ಯಾರ್ಥಿವೇತನ, 1980. ಮೆಲ್ಬೋರ್ನ್ ವಿಶ್ವವಿದ್ಯಾಲಯ, 1984-85 ವರ್ಷದಲ್ಲಿ ಪೋಸ್ಟ್-ಡಾಕ್ಟರಲ್ ಫೆಲೋಶಿಪ್. 1993 ರಲ್ಲಿ ಚೆನ್ನೈನಲ್ಲಿ ಅತ್ಯುತ್ತಮ ಸೇವೆಗಳು, ಸಾಧನೆಗಳು ಮತ್ತು ಕೊಡುಗೆಗಳಿಗಾಗಿ ರಾಷ್ಟ್ರೀಯ ಏಕತಾ ಪ್ರಶಸ್ತಿ-1993 ವಿಜೇತರು. ಸಮಕಾಲೀನ ಸಮಾಜಕ್ಕೆ ಅತ್ಯುತ್ತಮ ಕೊಡುಗೆಗಳಿಗಾಗಿ ವಿಶಿಷ್ಟ ನಾಯಕತ್ವದಿಂದ “ಡಿಸ್ಟಿಂಗ್ವಿಶ್ಡ್ ಲೀಡರ್ಶಿಪ್ ಅವಾರ್ಡ್” ವಿಜೇತರು ಆಗಿದ್ದರು.
ಡಾ.ಜಿ ಪರಮೇಶ್ವರ ರಾಜಕೀಯ ಜೀವನ
ಇನ್ನು ಇವರ ತಂದೆ ಎಂಎಲ್ಸಿ ಆಗಿದ್ದವರು. ಡಾ.ಜಿ ಪರಮೇಶ್ವರ 1989ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ. ಮೊದಲು 1989ರಲ್ಲಿ ಮಧುಗಿರಿಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ, ಶಾಸಕರಾಗುತ್ತಾರೆ. 1993ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ. ಬಳಿಕ 1994ರಲ್ಲಿ ಎರಡನೇ ಬಾರಿಗೆ ಮಧುಗಿರಿಯಲ್ಲಿ ಸೋಲುತ್ತಾರೆ. ಬಳಿಕ ಮತ್ತೆ 1999, 2004ರ ಮಧುಗಿರಿಯಲ್ಲಿ ಗೆಲುವು ಸಾಧಿಸುತ್ತಾರೆ. ಎಸ್.ಎಂ ಕೃಷ್ಣ ಸರ್ಕಾರದಲ್ಲಿ ಉತ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ ಸಚಿವ, ಕಾರ್ಮಿಕ ಇಲಾಖೆ, ಸಣ್ಣ ನಿರಾವರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕ್ಷೇತ್ರ ಬದಲಾವಣೆ
2008ರಲ್ಲಿ ಜಿ. ಪರಮೇಶ್ವರ ಕ್ಷೇತ್ರ ಬದಲಾವಣೆ ಮಾಡಿ, 2008ರಲ್ಲಿ ಕೊರಟಗೆರೆಯಿಂದ ಸ್ಪರ್ಧೆ ಮಾಡಿ ಶಾಸಕರಾಗಿ ಆಯ್ಕೆಯಾಗುತ್ತಾರೆ. 2010ರಿಂದ 2018ರವರೆಗೂ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದ ಅವರು 2013ರಲ್ಲಿ ಕೊರಟಗೆರೆಯಿಂದ ಸ್ಪರ್ಧೆಮಾಡಿ ಸೋಲು ಕಾಣುವ ಮೂಲಕ ಸಿ.ಎಂ.ಸ್ಥಾನ ವಂಚಿತರಾಗುತ್ತಾರೆ.
ಬಳಿಕ 2014ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹಸಚಿವರಾಗಿ ಕಾರ್ಯ ಮಾಡುತ್ತಾರೆ. ಮತ್ತೆ 2018ರಲ್ಲಿ ಕೊರಟಗೆರೆ ಕ್ಷೇತ್ರ ಮತ್ತೆ ಅವರನ್ನ ಶಾಸಕರಾಗಿ ಆಯ್ಕೆ ಮಾಡುತ್ತೆ. ಆಗ ಸಮಿಶ್ರ ಸರ್ಕಾರದಲ್ಲಿ ಡಿ.ಸಿ.ಎಂ ಆಗಿ ಆಯ್ಕೆ(ಕಾಂಗ್ರೆಸ್ ಮತ್ತು ಜೆ.ಡಿ.ಎಸ್.)ಯಾಗುತ್ತಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕೂಡ ಕಾರ್ಯ ಮಾಡಿದ ಅವರು ‘2023ರಲ್ಲಿ ಕೊರಟಗೆರೆಯಿಂದ ಸ್ಪರ್ಧೆ ಮಾಡಿ ಶಾಸಕರಾಗಿ ಆಯ್ಕೆಯಾಗಿದ್ದು, ಈ ಮೂಲಕ ಒಟ್ಟು 7ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, 5ಬಾರಿ ಶಾಸಕರಾಗಿ ಆಯ್ಕೆಯಾಗಿ, ಎರಡು ಬಾರಿ ಸೋಲು ಕಂಡಿದ್ದಾರೆ. ಜೊತೆಗೆ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಸದ್ಯ ದಲಿತ ಸಿಎಂ ರೇಸ್ನಲ್ಲಿದ್ದ ಪರಮೇಶ್ವರ
ಡಾ. ಜಿ. ಪರಮೇಶ್ವರ 2018 ರ ಸಮ್ಮಿಶ್ರ ಸರ್ಕಾರದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿದ್ದರು. ಆ ಮೂಲಕ ಇವರು ಕರ್ನಾಟಕದ 8ನೇ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ದಲಿತ ಮುಖಂಡರಾಗಿರುವ ಇವರು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ರಾಜ್ಯದ ದಲಿತ, ಇತರ ಪ್ರಮುಖ ಸಮುದಾಯಗಳು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿಶ್ವಾಸ ಗಳಿಸಿದ್ದಾರೆ. ಸತತ ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಇವರು ಅತಿ ದೀರ್ಘ ಕಾಲ ಈ ಹುದ್ದೆ ಅಲಂಕರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ರೇಸ್ನಲ್ಲಿ ಇವರು ಹೆಸರಿದೆ.