ಬೆಂಗಳೂರು: ಕೆ.ಆರ್ ಸರ್ಕಲ್ ಅಂಡರ್ ಪಾಸ್ (KR Circle UnderPass) ದುರಂತ ಸಂಭವಿಸಿ ಏಳು ದಿನ ಆಗಿದೆ. ಏಳು ದಿನ ಆದರೂ ಬಿಬಿಎಂಪಿ (BBMP) ಇನ್ನೂ ಮುನ್ನೆಚ್ಚರಿಕೆ ವಹಿಸಿಲ್ಲ. ನೀರು ತಡೆಗೆ ಬೂಮ್ ಬ್ಯಾರಿಯರ್ ಅಳಡಿಕೆನೂ ಮಾಡಿಲ್ಲ. ಹೀಗಾಗಿ ಬಿಬಿಎಂಪಿ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಕಳೆದ ವಾರ ಸುರಿದ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿತ್ತು. ಅದರಲ್ಲೂ ಕೆಆರ್ ಸರ್ಕಲ್ ಅಂಡರ್ ಪಾಸ್ ಬಳಿ ಕಾರು ಮುಳುಗಡೆ ಆಗಿ ಯುವತಿ ಸಾವನ್ನಪ್ಪಿದ್ದ ಪ್ರಕರಣ ಬೆಂಗಳೂರನ್ನ ಬೆಚ್ಚಿಬೀಳಿಸಿತ್ತು. ಈ ಘಟನೆ ಬಳಿಕ ಬಿಬಿಎಂಪಿ ಅಂಡರ್ ಪಾಸ್ಗಳ ಸರ್ವೆ ಮಾಡಿತ್ತು. ನೀರು ಅಂಡರ್ ಪಾಸ್ಗೆ ಹೋಗದಂತೆ ತಡೆಯಲು ಬೂಮ್ ಬ್ಯಾರಿಯರ್ ಅಳವಡಿಕೆ ಮಾಡೋದಾಗಿ ತಿಳಿಸಿದ್ರು.
ಜೊತೆಗೆ ಸೈರಾನ್ ಹಾಕುತ್ತೇವೆ ಅಂತಾನು ಹೇಳಿದ್ರು. 7 ದಿನ ಆದರೂ ಇನ್ನೂ ಕ್ರಮವಹಿಸಲ್ಲ. ಕೆ.ಆರ್ ಸರ್ಕಲ್ ಅಂಡರ್ ಪಾಸ್ ಬಳಿ ಬ್ಯಾರಿಕೇಡ್ ಬಿಟ್ಟರೆ ಬೇರೆ ಕ್ರಮ ಇಲ್ಲವೇ ಇಲ್ಲ. ಈ ಘಟನೆ ಬಳಿಕ ಅಂಡರ್ ಪಾಸ್ ಕೆಳಗಡೆ ಓಡಾಡಲು ವಾಹನಸವಾರರು ಭಯ ಪಡುತ್ತಿದ್ದಾರೆ. ನೀರು ನಿಲ್ಲದಂತೆ ಕ್ರಮ ವಹಿಸಿಲ್ಲ ಅಂತಾ ಬಿಬಿಎಂಪಿಗೆ ಛೀಮಾರಿ ಹಾಕ್ತಾ ಇದ್ದಾರೆ. ಒಟ್ಟಾರೆ ಮಳೆಗಾಲ ಆರಂಭ ಆಗ್ತಾ ಇದೆ ಅಷ್ಟರ ಒಳಗಡೆ ಮುಂಜಾಗ್ರತೆ ಅಗತ್ಯ. ಅಂಡರ್ ಪಾಸ್ ಗಳಲ್ಲಂತು ಎಚ್ಚರಿಕೆ ವಹಿಸಲೇ ಬೇಕಾಗುತ್ತೆ. ಬಿಬಿಎಂಪಿ ಮುಂಜಾಗ್ರತೆ ವಹಿಸ್ತೆವೆ ಅಂತಾ ಹೇಳಿ ವಹಿಸಿಲ್ಲ ಆಗಾಗಿ ಏನೆಲ್ಲ ಮುಂಜಾಗ್ರತೆ ವಹಿಸುತ್ತೆ ಕಾದು ನೋಡಬೇಕಿದೆ.