ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಮಂಗಳವಾರ ದಕ್ಷಿಣ ಕೊರಿಯಾ ತಲುಪಿದ್ದಾರೆ. ಇಂಚಿಯಾನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸೀತಾರಾಮನ್ ಅವರನ್ನು ಕೊರಿಯಾ ಗಣರಾಜ್ಯದ ಭಾರತದ ರಾಯಭಾರಿ ಅಮಿತ್ ಕುಮಾರ್ ಸ್ವಾಗತಿಸಿದರು.
“ಕೇಂದ್ರ ಹಣಕಾಸು ಸಚಿವೆ ಶ್ರೀಮತಿ @nsitharaman ಅವರು ತಮ್ಮ 4 ದಿನಗಳ ಅಧಿಕೃತ ಭೇಟಿಗಾಗಿ ಕೊರಿಯಾ ಗಣರಾಜ್ಯವನ್ನು ತಲುಪಿದರು. ಕೊರಿಯಾ ಗಣರಾಜ್ಯದ ಭಾರತದ ರಾಯಭಾರಿ ಶ್ರೀ @ KumarAmitMEA ಅವರು ಇಂದು ಮುಂಜಾನೆ ಇಂಚಿಯಾನ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅವರನ್ನು ಬರಮಾಡಿಕೊಂಡರು ಕೊರಿಯಾ ಹಣಕಾಸು ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ.
ಇಂದಿನಿಂದ 5ನೇ ತಾರೀಖೀನ ವರೆಗೆ ದಕ್ಷಿಣ ಕೊರಿಯಾದ ಇಂಚಿಯಾನ್ನಲ್ಲಿ ಹೂಡಿಕೆದಾರರು/ ದ್ವಿಪಕ್ಷೀಯ ಮತ್ತು ಇತರ ಸಂಬಂಧಿತ ಸಭೆಗಳೊಂದಿಗೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಆಡಳಿತ ಮಂಡಳಿಯ 56 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಸೀತಾರಾಮನ್ ಭಾರತೀಯ ನಿಯೋಗವನ್ನು ಮುನ್ನಡೆಸುತ್ತಿದ್ದಾರೆ ಎಂದು ಹಣಕಾಸು ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಅಧಿಕೃತ ಎಡಿಬಿ ಸದಸ್ಯ ನಿಯೋಗಗಳು, ವೀಕ್ಷಕರು, ಸರ್ಕಾರೇತರ ಮತ್ತು ನಾಗರಿಕ ಸಮಾಜ ಸಂಸ್ಥೆಗಳು, ಪತ್ರಕರ್ತರು, ಹಣಕಾಸು ಸಂಸ್ಥೆಗಳು, ಬ್ಯಾಂಕ್ಗಳು ಮತ್ತು ಇತರ ಖಾಸಗಿ ವಲಯದ ಉದ್ಯಮಗಳು ಸಹ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.