ಚಿತ್ರದುರ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಕೇಂದ್ರ ಸಚಿವ ಏ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗದ ಜಿಲ್ಲಾ ಪಂಚಾಯತ್ ಕಚೇರಿ ಬಳಿ ಅವರು ಮಾತನಾಡಿದ್ದು ಕಾಂಗ್ರೆಸ್ ನವರಿಗೆ ಅವರ ಮಂತ್ರಿ ಮಂಡಲಕ್ಕೆ ಜನರ ಕಷ್ಟ ಕೇಳುವ ಸಮಯ ಇಲ್ಲ. ಗ್ಯಾರಂಟಿ ಕಾರ್ಡ್ ಗಳನ್ನ ಯಾವ ರೀತಿ ಒದಗಿಸಿ ಅದಕ್ಕೆ ಯಾವ ರೀತಿ ಹಣ ಒದಗಿಸಬೇಕು. ಗ್ಯಾರಂಟಿ ಕಾರ್ಡ್ ಗಳಿಗೆ ಮಾತ್ರ ಸರ್ಕಾರ ರಚನೆ ಮಾಡುತ್ತೇವೆ. ಗ್ಯಾರಂಟಿ ಕಾರ್ಡ್ ಗಳಿಗೆ ಮಾತ್ರ 5 ವರ್ಷ ಸರ್ಕಾರ ನಡೆಸುವ ಚಿಂತನೆಯಲ್ಲಿ ಕಾಂಗ್ರೆಸ್ ನವರು ಮುಳುಗಿದ್ದಾರೆ. ಜನರಿಗೆ ಪ್ರಕೃತಿಯಿಂದಾಗುವ ತೊಂದರೆಗಳಿಗೆ ಸಮಯ ಕೊಡುವ ಪರಿಸ್ಥಿತಿ ಕಾಂಗ್ರೆಸ್ ಗೆ ಇಲ್ಲ.
ಸಿದ್ದಾರಾಮಯ್ಯ ಅಥವಾ ಡಿಕೆಶಿ ಅವರ ಹೇಳಿಕೆಗೆ ಧಾಖಲೆಗಳು ಇವೆ. ಮೋದಿಯವರು ಅಧಿಕಾರಕ್ಕೆ ಬಂದಾಗ ಪ್ರತಿ ವ್ಯಕ್ತಿಗೆ 15 ಲಕ್ಷ ಅಕೌಂಟ್ ಗೆ ಹಾಕುವುದಾಗಿ ಎಲ್ಲೂ ಹೇಳಿಲ್ಲ. ಅವರು ಆ ರೀತಿ ಹೇಳಿದ್ದರೆ ನಾನು ರಾಜಕೀಯದಿಂದ ನಿವೃತ್ತಿ ಆಗುವುದಾಗಿ ನಾರಾಯಣ ಸ್ವಾಮಿ ಅವರು ಹೇಳಿದ್ದಾರೆ. ಇನ್ನೂ ಮೈಸೂರಿನಲ್ಲಿ ಗುಂಬಾಜ್ ಮಾದರಿಯ ಬಸ್ ನಿಲ್ದಾಣ ನಿರ್ಮಾಣ ಕುರಿತು ಸಚಿವರು ಮಾತನಾಡಿದ್ದು ನಾನು ಧರ್ಮದ ವಿಚಾರದಲ್ಲಿ ಆಡಳಿತ ವ್ಯವಸ್ತೆಯನ್ನ ತೆಗೆದುಕೊಂಡು ಹೋಗುವವನು. ಈ ರೀತಿ ಮಾಡುವುದು ಯಾವುದೇ ರಾಜಕೀಯ ಪಕ್ಷಕ್ಕೆ ಶೋಭೆ ತರಯವುದಿಲ್ಲ ಎಂದು ಸಚಿವ ಏ ನಾರಾಯಣ ಸ್ವಾಮಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ