ಉಡುಪಿ: ದೇಶವನ್ನು 60 ವರ್ಷಗಳ ಕಾಲ ಲೂಟಿ ಹೊಡೆದವರು ಒಂದು ಕಡೆ ಸೇರಿದ್ದರು. ಅವರು ತಮ್ಮ ಒಕ್ಕೂಟಕ್ಕೆ INDIA ಎಂದು ಹೆಸರು ಇಟ್ಟಿದ್ದಾರೆ. ಅವರದ್ದು ಇಂಡಿಯಾ ಅಲ್ಲ, ಲೂಟಿಕೋರ ಈಸ್ಟ್ ಇಂಡಿಯಾ ಕಂಪನಿ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ (Shobha Karandlaje) ಲೇವಡಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ನಡೆದ 26 ಪಕ್ಷಗಳ ನಾಯಕರ ಸಭೆಯ ಬಗ್ಗೆ ತೀವ್ರ ಟೀಕಾಪ್ರಹಾರ ಮಾಡಿದರು.
ಸಭೆಯಲ್ಲಿ ಸೇರಿದ ಎಲ್ಲರೂ ಕೂಡ ಪ್ರಧಾನ ಮಂತ್ರಿ ಅಭ್ಯರ್ಥಿಗಳಾಗಿದ್ದಾರೆ. ಈ ಹಿಂದೆ ಕೂಡ ಅವರು ಒಕ್ಕೂಟವನ್ನು ರಚಿಸಿ ವೈಫಲ್ಯ ಕಂಡಿದ್ದರು. ಈಗ ಹೊಸ ಹೆಸರಿನೊಂದಿಗೆ ಬಂದಿದ್ದಾರೆ. ಅವರಲ್ಲಿರುವ ಬಹುಪಾಲು ಜನರು ಲೂಟಿಕೋರರಾಗಿದ್ದಾರೆ. ಅವರು INDIA ಎಂಬ ಹೆಸರು ಇಟ್ಟದ್ದೇ ಕಾನೂನುಬಾಹಿರವಾಗಿದೆ ಎಂದು ಸಚಿವರು ಹೇಳಿದರು.
”ದೇಶವನ್ನು 60 ವರ್ಷ ಲೂಟಿ ಹೊಡೆದವರು ಒಂದಾಗಿ ರಚಿಸಿದ ಒಕ್ಕೂಟಕ್ಕೆ ‘ಇಂಡಿಯಾ’ ಹೆಸರಿಟ್ಟಿದ್ದು, ಅವರದ್ದು ಇಂಡಿಯಾ ಅಲ್ಲ, ‘ಲೂಟಿಕೋರ ಈಸ್ಟ್ ಇಂಡಿಯಾ ಕಂಪನಿ’. ”ಬೆಂಗಳೂರಿನಲ್ಲಿ ಮಂಗಳವಾರ ಸಭೆಯಲ್ಲಿದ್ದ 26 ಪಕ್ಷಗಳ ಮುಖಂಡರೆಲ್ಲರೂ ಪ್ರಧಾನಿ ಅಭ್ಯರ್ಥಿಗಳಾಗಿದ್ದಾರೆ. ಬಹುಪಾಲು ಮಂದಿ ಲೂಟಿಕೋರರಾಗಿದ್ದು, ಒಕ್ಕೂಟಕ್ಕೆ ಇಂಡಿಯಾ ಹೆಸರಿಟ್ಟಿದ್ದೇ ಕಾನೂನುಬಾಹಿರ,” ಎಂದರು.