ಬೆಂಗಳೂರು: 2013ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿಯೇ ಭಾರತ ಕೊನೆಯ ಬಾರಿ ಐಸಿಸಿ ಆಯೋಜನೆಯ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಆದರೆ, ಅಂದಿನಿಂದ ಇಲ್ಲಿಯವರೆಗೂ ಐಸಿಸಿ ಆಯೋಜನೆಯ ಎಲ್ಲಾ ಟೂರ್ನಿಗಳಲ್ಲಿ ವೈಫಲ್ಯ ಅನುಭವಿಸಿ ನಿರಾಶೆ ಅನುಭವಿಸಿದೆ. ಮತ್ತೊಂದು ಮಹತ್ವದ ವಿಶೇಷ ಏನೆಂದರೆ ನಾಯಕನಾಗಿ ವಿರಾಟ್ ಕೊಹ್ಲಿ ದ್ವಿಪಕ್ಷೀಯ ಸರಣಿಗಳಲ್ಲಿ ಯಶಸ್ವಿಯಾದರೂ ಮಹತ್ವದ ಟೂರ್ನಿಗಳಲ್ಲಿ ನಾಕ್ಔಟ್ ಹಂತದಲ್ಲಿ ವೈಫಲ್ಯ ಅನುಭವಿಸಿದ್ದರು.
ಇದೀಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ತವರಿನಲ್ಲಿ ಆಡಲು ಎದುರು ನೋಡುತ್ತಿದೆ. ಮತ್ತೊಂದು ಕಡೆ ಮಾಜಿ ಕ್ರಿಕೆಟಿಗರು ಈಗಲೇ ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಇದೀಗ ವೆಸ್ಟ್ ಇಂಡೀಸ್ ಮಾಜಿ ಆರಂಭಿಕ ಹಾಗೂ ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಆರಿಸಿದ್ದಾರೆ.
ಈ ಬಾರಿ ಏಕದಿನ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಭಾರತ. ಇದು ನಿಜಕ್ಕೂ ತುಂಬಾ ಆಸಕ್ತದಾಯಕವಾಗಿದೆ. ಅಂದ ಹಾಗೆ ಮಹತ್ವದ ಟೂರ್ನಿಗೆ ಬಿಸಿಸಿಐ ಯಾವ ತಂಡವನ್ನು ಆಯ್ಕೆ ಮಾಡಲಿದೆ ಎಂಬುದನ್ನು ನೋಡಲು ಎದುರು ನೋಡುತ್ತಿದ್ದೇನೆ. ಏಕೆಂದರೆ ಭಾರತ ತಂಡದಲ್ಲಿ ಅವಕಾಶ ಪಡೆಯಲು ಸಾಕಷ್ಟು ಆಟಗಾರರು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ತವರಿನಲ್ಲಿ ವಿಶ್ವಕಪ್ ಟೂರ್ನಿ ನಡೆಯುತ್ತಿರುವ ಕಾರಣ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿದೆ,” ಎಂದು ಹೇಳಿದ್ದಾರೆ.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ 2011ರ ಚಾಂಪಿಯನ್ಸ್ ತಂಡದ ಏಕೈಕ ಆಟಗಾರರಾಗಿದ್ದಾರೆ. ಇನ್ನು ವಿರಾಟ್ ಕೊಹ್ಲಿಗೆ ಇದೀಗ 34 ವರ್ಷ ವಯಸ್ಸು. ಹಾಗಾಗಿ ಅವರು ಎಷ್ಟು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮುಂದುವರಿಯಲಿದ್ದಾರೆಂದು ಇನ್ನೂ ಗೊತ್ತಿಲ್ಲ.
ವಿರಾಟ್ ಕೊಹ್ಲಿ ಇನ್ನೂ ಮತ್ತೊಂದು ವಿಶ್ವಕಪ್ ಟೂರ್ನಿ ಆಡಬಹದು. ಹಾಗಾಗಿ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಕೊನೆಯಾಗುವುದಿಲ್ಲ,” ಎಂದು ಕ್ರಿಸ್ ಗೇಲ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ಇದೀಗ 46 ಒಡಿಐ ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (49 ಶತಕಗಳು) ಅವರನ್ನು ಹಿಂದಿಕ್ಕಲು ಕೊಹ್ಲಿ ಇನ್ನು ಕೇವಲ 4 ಶತಕಗಳು ಅಗತ್ಯವಿದೆ. ಅಂದ ಹಾಗೆ ಭಾರತ ತಂಡ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ದ ತನ್ನ ಮೊದಲನೇ ಪಂದ್ಯ ಆಡಲಿದೆ.