ಟಿಕೆಟ್ ಟೆನ್ಷನ್ ನಿಂದ ಹೊರ ಬರ್ತಿದ್ದಂತೆ ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯ ಪ್ರವಾಸಕ್ಕೆ ತಯಾರಿ ನಡೆಸಿದ್ದಾರೆ. ರಾಹುಲ್, ಪ್ರಿಯಾಂಕ ರಾಜ್ಯ ಭೇಟಿಗೂ ಮುಹೂರ್ತ ಫಿಕ್ಸ್ ಆಗಿದ್ದು, ಚುನಾವಣಾ ಕಣದಲ್ಲಿ ಧೂಳೆಬ್ಬಿಸಲು ರೆಡಿಯಾಗಿದ್ದಾರೆ. ಈ ಕಡೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಸ್ವಕ್ಷೇತ್ರ ಉಳಿಸಿಕೊಳ್ಳುವ ಟೆನ್ಷನ್ ನಡುವೆಯೇ, ಪ್ರವಾಸಕ್ಕೆ ರೆಡಿಯಾಗ್ತಿದ್ದಾರೆ. ಡಿ.ಕೆ ಶಿವಕುಮಾರ್ ಇಂದಿನಿಂದ ಮೂರು ದಿನ ಟೆಂಪಲ್ ರನ್ ಜೊತೆ ಜೊತೆಗೇ ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದಾರೆ..
224 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್ ಆಗಿದ್ರೂ, ಟಿಕೆಟ್ ಜಟಾಪಟಿಗೆ ಬ್ರೇಕ್ ಬಿದ್ದಿಲ್ಲ. ಖರ್ಗೆ, ಕೆಚ್ ಮುನಿಯಪ್ಪ ಸಪೋರ್ಟ್ ನಿಂದ ಟಿಕೆಟ್ ಹಂಚಿಕೆಯಲ್ಲಿ ಡಿ.ಕೆ ಶಿವಕುಮಾರ್ ಮೇಲುಗೈ ಸಾಧಿಸಿದ್ದಾರೆ. ಬೆಂಬಲಿಗರಿಗೆ ಟಿಕೆಟ್ ಕೊಡಿಸಲುವಲ್ಲಿ ಸಿದ್ದರಾಮಯ್ಯಗೆ ಹಿನ್ನಡೆ ಆಗಿದೆ. ಟಗರು ಪವರ್ ನ್ನ ಚುನಾವಣಾ ಅಖಾಡದಲ್ಲಿ ತೋರಿಸಬೇಕು ಅಂತಾ ಸಿದ್ದು ಬೆಂಬಲಿಗರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ತಮ್ಮವರನ್ನ ಗೆಲ್ಲಿಸಿಕೊಳ್ಳುವ ಟಾಸ್ಕ್ ಸಿದ್ದರಾಮಯ್ಯ ಹೆಗಲೇರಿಸಿಕೊಂಡಿದ್ದು, ಇಡೀ ಟೀಂ ಅಖಾಡಕ್ಕಿಳಿದಿದೆ. ಸಿದ್ದರಾಮಯ್ಯ ಪ್ರತ್ಯೇಕ ಯಾತ್ರೆ ನಡೆಸಲು ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದ್ದಾರೆ.
ರ್ಯಾಲಿಗಳಲ್ಲಿ ಜನ ಸೇರಿಸಿ ಖದರ್ ತೋರಿಸಲು ಮುಂದಾಗಿದ್ದಾರೆ. ಸೋಮವಾರದಿಂದ ಒಂದು ವಾರ ಕಾಲ ಸಿದ್ದರಾಮಯ್ಯ ಪ್ರಚಾರಕ್ಕೆ ಹೊರಡಲಿದ್ದಾರೆ. ಬೆಳಗಾವಿಯ ಎಲ್ಲಾ ಕ್ಷೇತ್ರಗಳಲ್ಲಿ ಮೂರು ದಿನ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ವಿಜಯನಗರ, ರಾಯಚೂರು, ಸಿಂದನೂರು ಭಾಗದಲ್ಲಿ ಕ್ಯಾಂಪೇನ್ ನಡೆಸಲಿದ್ದಾರೆ. ಈ ಕಡೆ ಡಿ.ಕೆ ಶಿವಕುಮಾರ್ ಅವ್ರು ನಾಳೆಯಿಂದಲೇ ಮೂರು ದಿ ನ ಟೆಂಪಲ್ ರನ್ ಹೊರಟಿದ್ದಾರೆ. ಇಂದು ಬೆಳಿಗ್ಗೆ ಧರ್ಮಾಸ್ಥಳಕ್ಕೆ ತೆರಳಿ ಮಂಜುನಾಥನ ಮೊರೆ ಹೋಗಲಿದ್ದಾರೆ.. ನಂತ್ರ ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಪ್ಲ್ಯಾನ್ ಮಾಡಿದ್ದಾರೆ.. ಬೆಳ್ತಂಗಡಿ, ಬೈಂದೂರು, ಉಡುಪಿ ಜೆಲ್ಲೆಯಲ್ಲಿ ಚುನಾವಣಾ ಪ್ರಚಾರ ಹಮ್ಮಿಕೊಂಡಿದ್ದಾರೆ..
ಸಿದ್ದಾರಾಮಯ್ಯನವ್ರಿಗೆ ಪ್ರಚಾರದ ಭರಾಟೆ ನಡುವೆ ಸ್ವಕ್ಷೇತ್ರ ವರುಣಾ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ. ವರುಣಾದಲ್ಲಿ ಮತಭೇಟೆಗೆ ಬಿಎಸ್ ಯಡಿಯೂರಪ್ಪ ಅಖಾಡಕ್ಕೆ ಇಳಿದಿರೋದ್ರಿಂದ, ಸಿದ್ದರಾಮಯ್ಯನವ್ರಿಗೆ ಆತಂಕ ಹೆಚ್ಚಾಗಿದೆ. ನಾಳೆ ವರುಣಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ತೆರಳಲಿದ್ದಾರೆ.. ಬೆಳಿಗ್ಗೆಯಿಂದ ರಾತ್ರಿವರೆಗೆ ಬಿಡುವಿಲ್ಲದ ಪ್ರಚಾರ ಹಮ್ಮಿಕೊಂಡಿದ್ದಾರೆ. ಒಟ್ನಲ್ಲಿ ಸಿದ್ದು – ಡಿಕೆಶಿ ಕೋಲ್ಡ್ ವಾರ್ ನಿಂದ ಹೈಕಮಾಂಡ್ ಗೂ ಸ್ಬಲ್ಪ ಬಿಸಿಯಾಗಿದೆ. ಎದುರಿಗೆ ಜೋಡೆತ್ತುಗಳಂತೆ ಕಾಣ್ತಾ ಇದ್ರೂ, ಒಳಗೊಳಗೇ ಕುದಿಯುತ್ತಿದ್ದಾರೆ. ಚುನಾವಣಾ ರ್ಯಾಲಿಗಳಲ್ಲಿ ಇಬ್ಬರ ನಡುವಿನ ಅಸಮಧಾನ ಎದ್ದು ಕಾಣಬಾರದು ಅಂತಾ ಕೈ ಪಡೆ ಎಚ್ಚರಿಕೆ ವಹಿಸ್ತಿದೆ