ಬೆಂಗಳೂರು:- ಗಾಳಿಯಿಂದ ನೀರನ್ನು ಹೊರತೆಗೆಯುವ ತಂತ್ರಜ್ಞಾನ ವಿಶ್ವದ ಕೆಲವೆಡೆ ಬಳಕೆ ಆಗುತ್ತಿದೆ. ಬೆಂಗಳೂರಿನಲ್ಲಿ ಉರವು ಲ್ಯಾಬ್ಸ್ ಎಂಬ ಸ್ಟಾರ್ಟಪ್ ಈ ತಂತ್ರಜ್ಞಾನ ಬಳಸಿ ನೀರನ್ನು ತೆಗೆದು ಮಾರಾಟ ಮಾಡುತ್ತಿದೆ. ಕಳೆದ 8 ತಿಂಗಳಲ್ಲಿ ಬೆಂಗಳೂರಿನಲ್ಲಿ ಮೂರೂವರೆ ಲಕ್ಷ ಲೀಟರ್ ನೀರನ್ನು ಅದು ಮಾರಿದೆ.
ಕ್ಯಾಲ್ಷಿಯಂ ಆಕ್ಸೈಡ್, ಕ್ಯಾಲ್ಷಿಯಮ್ ಕ್ಲೋರೈಡ್ ಇತ್ಯಾದಿ ತೇವ ಹೀರುವ ವಸ್ತುಗಳ ಗುಣಗಳನ್ನು ಆಧರಿಸಿ ಗಾಳಿಯಿಂದ ನೀರು ತೆಗೆಯುವ ತಂತ್ರಜ್ಞಾನವನ್ನು ಉರವು ಅಭಿವೃದ್ಧಿಪಡಿಸಿದೆ. ಈ ವಸ್ತುಗಳ ಮೂಲಕ ಗಾಳಿಯಲ್ಲಿರುವ ತೇವಾಂಶವನ್ನು ಹೀರಿಕೊಳ್ಳಲಾಗುತ್ತದೆ. ಬಳಿಕ ಅದನ್ನು ಬಿಸಿ ಮಾಡಿ ಆವಿ ಹೊರಬರಿಸಲಾಗುತ್ತದೆ. ನಿಯಂತ್ರಿತ ರೀತಿಯಲ್ಲಿ ಬಿಸಿ ಮಾಡುವುದು ಮತ್ತು ತಣ್ಣಗಾಗಿಸುವುದು ಈ ಪ್ರಕ್ರಿಯೆಗಳ ಮೂಲಕ ಈ ಆವಿಯನ್ನು ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತದೆ ಎಂದು ಉರವು ಲ್ಯಾಬ್ಸ್ ಸಿಇಒ ಹೇಳಿದ್ದಾರೆ.
ಲ್ಯಾಬ್ಸ್ ಹೊಂದಿದೆ. ಕಳೆದ ಒಂದು ವರ್ಷದಿಂದಲೂ ನೀರಿನ ತಯಾರಿಕೆ ಮಾಡುತ್ತಿದೆ. ವಿಶೇಷವೆಂದರೆ ಉರವು ಲ್ಯಾಬ್ಸ್ನ ನೀರಿನ ಬಾಟಲ್ಗಳು ಪ್ಲಾಸ್ಟಿಕ್ ಅಲ್ಲ, ಬದಲಾಗಿ ಗಾಜಿನ ಬಾಟಲ್ ಬಳಸುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸುತ್ತಿದೆ. ಹಿಂದೆ ಪೆಪ್ಸಿ, ಕೋಕಕೋಲಾ ಇತ್ಯಾದಿ ಕೂಲ್ ಡ್ರಿಂಕ್ಸ್ಗಳು ಗಾಜಿನ ಬಾಟಲಿಯಲ್ಲಿ ಬರುತ್ತಿದ್ದವು. ಕುಡಿದ ಬಳಿಕ ಬಾಟಲಿಯನ್ನು ವಾಪಸ್ ನೀಡಬಹುದಿತ್ತು. ಅದೇ ರೀತಿಯಲ್ಲಿ ಉರವು ಲ್ಯಾಬ್ಸ್ ತನ್ನ ‘ಫ್ರಂ ಏರ್’ ನೀರಿನ ಬಾಟಲಿಗಳಿಗೆ ಪ್ರಯೋಗ ಮಾಡುತ್ತಿದೆ.
ಬೆಂಗಳೂರಿನಲ್ಲಿ ಸಂಸ್ಥೆ ಕಳೆದ 8 ತಿಂಗಳಲ್ಲಿ 3.5 ಲಕ್ಷ ಬಾಟಲ್ ನೀರನ್ನು ಮಾರಾಟ ಮಾಡಿದೆ. ತಮ್ಮ ಉತ್ಪನ್ನದ ಬಗ್ಗೆ ವಿಶ್ವಾಸ ಇರುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಸಿಇಒ ಸ್ವಪ್ನಿಲ್ ಶ್ರೀವಾಸ್ತವ ಹೇಳುತ್ತಾರೆ.
ಉರವು ಲ್ಯಾಬ್ಸ್ನ ನೀರಿನ ಬಾಟಲ್ನಲ್ಲಿ ‘ಫ್ರಂ ಏರ್’ ಟ್ರೇಡ್ಮಾರ್ಕ್ ಗಮನಿಸಬಹುದು. ಕಾರ್ಪೊರೇಟ್ ಕಂಪನಿಗಳು ಸಾಕಷ್ಟು ಬಾರಿ ತಮ್ಮದೇ ಬ್ರ್ಯಾಂಡ್ ಅನ್ನು ಹಾಕಿಸುತ್ತವಾದರೂ ‘ಫ್ರಂ ಏರ್’, ಮತ್ತು ‘ಕ್ರಾಫ್ಟೆಡ್ ಬೈ ಉರವು’ ಎಂಬುದು ಬಾಟಲ್ನಲ್ಲಿ ನಮೂದಾಗಿರುತ್ತದೆ
ಉರವು ಲ್ಯಾಬ್ಸ್ ಬೆಂಗಳೂರಿನಲ್ಲಿ ಒಂದು ತಯಾರಿಕಾ ಘಟಕ ಹೊಂದಿದೆ. ಇದರಲ್ಲಿ 70 ಉದ್ಯೋಗಿಗಳಿದದಾರೆ. ಇದರ ತಂತ್ರಜ್ಞಾನ ಆಧರಿಸಿದ ಹಲವು ಅಪ್ಲಿಕೇಶನ್ಗಳಿವೆ. ಅಬುಧಾಬಿಯಲ್ಲಿ ಮರಗಿಡಗಳಿಗೆ ಗಾಳಿಯಿಂದ ನೀರು ಒದಗಿಸುವ ಹೈಡ್ರೋಪೋನಿಕ್ಸ್ ಪ್ರಾಜೆಕ್ಟ್ ಅನ್ನು ಉರವು ಲ್ಯಾಬ್ಸ್ ನಡೆಸುತ್ತಿದೆ.
ಉರವು ಲ್ಯಾಬ್ಸ್ನ ಒಂದು ಹಿನ್ನಡೆ ಎಂದರೆ ಇದರ ನೀರು ತಯಾರಿಕಾ ವೆಚ್ಚ. ಒಂದು ಲೀಟರ್ ನೀರು ತೆಗೆಯಲು 4ರಿಂದ 5 ರೂ ಆಗುತ್ತದಂತೆ. ಆದರೆ, ನೀರಿನ ಕೊರತೆ ಇನ್ನಷ್ಟು ತೀವ್ರವಾದಾಗ ಈ ತಂತ್ರಜ್ಞಾನ ಸಹಾಯಕ್ಕೆ ಬರುತ್ತದೆ.