ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗ್ತಿದ್ದಂತೆ ಅರ್ಬನ್ ನಕ್ಸಲ್ ಚಟುವಟಿಕೆ ಆರಂಭವಾಗಿದೆ ಎಂದು ಮಾಜಿ ಶಾಸಕ ಸಿಟಿ ರವಿ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾ ಇದ್ದಂತೆ ಅರ್ಬನ್ ನಕ್ಸಲರು ಬಿಲದಿಂದ ಹೊರ ಬಂದಿದ್ದಾರೆ.
ಈಗ ಮತ್ತೆ ಚಿಕ್ಕಮಗಳೂರು ಭಾಗದಲ್ಲಿ ಇನ್ನು ಕೆಲವೆಡೆ ನಕ್ಸಲ್ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಛತ್ತಿಸಘಡದಲ್ಲಿ ಚಟುವಟಿಕೆ ಆದಂತೆ ಇಲ್ಲಿ ಹಾಗೆ ಆಗಬಹುದು. ಈಗ ಅವರು ಹೊರ ಬಂದಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಬಾಲ ಮುದುರಿಕೊಂಡು ಇದ್ರು. ಅವರಿಗೆ ಬುಲೆಟ್ ಮೇಲೆ ನಂಬಿಕೆ ಬ್ಯಾಲೆಟ್ ಮೇಲೆ ಅಲ್ಲ.
ಈಗ ಪಠ್ಯ ಬದಲಾವಣೆ ಮಾಡಿ ಎಂದು ಮುಂದೆ ಬಂದಿದ್ದಾರೆ. ತಮ್ಮ ಬೆಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಮಾಜಿ ಶಾಸಕ ಸಿಟಿ ರವಿ ಗಂಭೀರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅನುಭವದ ಆಧಾರದ ಮೇಲೆ ಆಡಳಿತ ಮಾಡ್ತಾರೆ ಎಂದು ನಂಬಿದ್ದೇವೆ.
2018 ರಲ್ಲಿ ಮಾಡಿದಂತೆ ಮಾಡಿದ್ರೆ, 2024 ರಿಸಲ್ಟ್ ಉತ್ತರ ನೀಡತ್ತೆ. ಮಿದುಳನ್ನೇ ನಗರ ನಕ್ಸಲ್ ಗೆ ಒಪ್ಪಿಸಿದ್ರೆ ನಾವು ಸುಮ್ನೆ ಇರಲ್ಲ. ನಾವು ಸೋತಿರಬಹದು. ಸೀಟ್ ಕಡಿಮೆ ಆಗಿರಬಹುದು. ಆದ್ರೆ ನಮಗೂ 36% ಓಟ್ ಹಾಕಿದ್ದಾರೆ. ಈ ಚುನಾವಣೆ ಲೈಫ್ ಟೈಮ್ ಅಲ್ಲ. ಮತ್ತೆ ಮತ್ತೆ ಚುನಾವಣೆ ಬರ್ತಾ ಇರುತ್ತದೆ ನೆನಪಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ.