ಬಿಗ್ ಬಾಸ್ ಹಿಂದಿ ಕಾರ್ಯಕ್ರಮದ ಮಾಜಿ ಸ್ಪರ್ಧಿ, ನಟಿ ಉರ್ಫಿ ಜಾವೇದ್ ನಿನ್ನೆ ಮಾಡಿದ ಟ್ವೀಟ್ ಒಂದು ಆಕೆಯ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಸದಾ ಅರ್ಧಂಬರ್ದ ಬಟ್ಟೆ ತೊಡೋ ಊರ್ಫಿ ಇನ್ನು ಮುಂದೆ ಹಾಗಾಗಲ್ಲ ಎಂದು ಕ್ಷಮೆ ಕೇಳಿ ಅಚ್ಚರಿ ಮೂಡಿಸಿದ್ದರು.
‘ನನ್ನ ಬಟ್ಟೆ ಕಾರಣದಿಂದಾಗಿ ನಿಮಗೆಲ್ಲ ನೋವಾಗಿದ್ದರೆ ಕ್ಷಮಿಸಿ. ಇನ್ಮುಂದೆ ಆ ರೀತಿಯ ಬಟ್ಟೆಗಳನ್ನು ಹಾಕುವುದಿಲ್ಲ. ನೀವು ಬದಲಾದ ಉರ್ಫಿ ನೋಡುತ್ತೀರಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಉರ್ಫಿ ಬರೆದುಕೊಂಡಿದ್ದರು.
ಉರ್ಪಿಯ ಬಟ್ಟೆಗೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಆಕೆಯ ವಿರುದ್ಧ ಪೊಲೀಸ್ ಇಲಾಖೆಯಲ್ಲೂ ದೂರು ದಾಖಲಾಗಿತ್ತು. ಇದೇ ಕಾರಣಕ್ಕೆ ಉರ್ಫಿ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಹೇಳಲಾಗಿತ್ತು. ಆಕೆಯ ಟ್ವೀಟ್ ಗೆ ಈಗಲಾದರೂ ಬುದ್ಧಿ ಬಂತಲ್ಲ, ಒಳ್ಳೆಯದಾಗಲಿ ಎಂದು ಹಲವರು ಕಾಲೆಳೆದಿದ್ದರು.
ಆದರೆ, ಇವತ್ತು ಉರ್ಫಿ ಮತ್ತೊಂದು ಶಾಕ್ ನೀಡಿದ್ದಾರೆ. ಮತ್ತೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ‘ನಾನು ನಿಮಗೆ ಏಪ್ರಿಲ್ ಫೂಲ್ ಮಾಡಿದೆ. ಉರ್ಫಿ ಬದಲಾಗಲ್ಲ’ ಎಂದು ಟ್ವೀಟ್ ಮಾಡುವ ಮೂಲಕ ನಿನ್ನೆ ಅಭಿಮಾನಿಗಳನ್ನು ಮೂರ್ಖರನ್ನಾಗಿ ಮಾಡಿದೆ ಎಂದು ಉರ್ಫಿ ಬರೆದುಕೊಂಡಿದ್ದಾರೆ.