ನಿತ್ಯ ಚಿತ್ರ, ವಿಚಿತ್ರ ಬಟ್ಟೆ ಧರಿಸಿ ಸುದ್ದಿಯಾಗೋ ನಟಿ ಐರ್ಫಿ ಜಾವೇದ್ ಇದೀಗ ಬಾಲಿವುಡ್ ನ ಖ್ಯಾತ ನಟ ರಣಬೀರ್ ಕಪೂರ್ ವಿರುದ್ಧ ಗರಂ ಆಗಿದ್ದಾರೆ. ಉರ್ಫಿ ಕುರಿತಾಗಿ ಮಾತನಾಡಿದ್ದಕ್ಕಾಗಿ ರಣಬೀರ್ ನರಕಕ್ಕೆ ಹೋಗಲಿ ಎಂದು ಶಾಪ ಹಾಕಿದ್ದು, ಸದ್ಯ ಉರ್ಫಿ ಆಡಿರುವ ಮಾತುಗಳು ವೈರಲ್ ಆಗಿದೆ.
ಸಂದರ್ಶನವೊಂದರಲ್ಲಿ ಉರ್ಫಿ ಜಾವೇದ್ ಬಟ್ಟೆಯ ಕುರಿತು ಮಾತನಾಡಿದ್ದ ರಣಬೀರ್ ಕಪೂರ್, ‘ಆಕೆಯದ್ದು ಅತೀ ಕೆಟ್ಟ ಟೇಸ್ಟು. ಬಟ್ಟೆ ಧರಿಸುವ ಕ್ರಮ ಸರಿಯಾಗಿಲ್ಲ’ ಎಂದಿದ್ದರು. ಈ ಮಾತು ಕೇಳಿದ ಉರ್ಫಿ ರಣವೀರ್ ಮೇಲೆ ಕೆಂಡಾಮಂಡಲವಾಗಿದ್ದಾರೆ. ರಣಬೀರ್ ನರಕಕ್ಕೆ ಹೋಗಲಿ ಎಂದು ಹಿಡಿ ಶಾಪ ಹಾಕಿದ್ದಾರೆ.
ಉರ್ಫಿ ಕೋಪ ಮಾಡಿಕೊಳ್ಳುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಖಾನ್ ಗಳ ವಿಚಾರದಲ್ಲಿ ಕಂಗನಾ ಟ್ವೀಟ್ ವೊಂದನ್ನು ಮಾಡಿದ್ದರು. ಅದರಲ್ಲಿ ಈ ದೇಶವು ಎಲ್ಲ ಖಾನ್ ಗಳನ್ನು ಮಾತ್ರ ಪ್ರೀತಿಸುತ್ತದೆ ಎಂದು ಬರೆದುಕೊಂಡಿದ್ದರು. ಅಲ್ಲದೇ, ಮುಸ್ಲಿಂ ನಟಿಯರ ಮೇಲೆ ಗೀಳನ್ನು ಅದು ಹೊಂದಿದೆ ಎಂದೂ ಬರೆದುಕೊಂಡಿದ್ದರು. ಈ ಬರಹ ಉರ್ಫಿಗೆ ಇಷ್ಟವಾಗಿರಲಿಲ್ಲವಂತೆ. ಹಾಗಾಗಿ ಕಂಗನಾಗೆ ತಿರುಗೇಟು ನೀಡಿದ್ದ ಉರ್ಫಿ, ‘ಮುಸ್ಲಿಂ ನಟ, ಹಿಂದು ನಟ ಅಂತ ವಿಂಗಡಣೆ ಏಕೆ? ಕಲೆಯಲ್ಲಿ ಧರ್ಮವಿಲ್ಲ. ಕಲಾವಿದರ ಮಾತ್ರ ಇರುತ್ತಾರೆ’ ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು.