ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸದಾ ದುಬಾರಿ ವಸ್ತುಗಳನ್ನ ಬಳಸುವ ಮೂಲಕವೇ ಸದ್ದು ಮಾಡ್ತಿರ್ತಾರೆ. ಇತ್ತೀಚೆಗೆ ವಜ್ರಖಚಿತ ಮೊಬೈಲ್ ಬಳಕೆ ಮಾಡಿ ಸುದ್ದಿಯಾಗಿದ್ದ ನಟಿ ಇದೀಗ ಚಿನ್ನದ ಒಳ ಉಡುಪು ಧರಿಸಿ ಸದ್ದು ಮಾಡ್ತಿದ್ದಾರೆ.
ಚಿನ್ನದ ಒಳ ಉಡುಪು ಧರಿಸಿ ಫೋಟೋಗೆ ಫೋಸ್ ಕೊಟ್ಟಿರುವ ನಟಿ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ತಾನು ಧರಿಸಿರುವ ಒಳ ಉಡುಪು ಚಿನ್ನದು ಎಂದು ಹೇಳಿಲ್ಲ. ನೆಟ್ಟಿಗರೇ ಇದು ಚಿನ್ನದ ಒಳ ಉಡುಪು ಎಂದು ಊಹಿಸಿದ್ದಾರೆ.
ದುಬಾರಿ ವಸ್ತುಗಳ ಹೊರತಾಗಿ ಊರ್ವಶಿ ಕ್ರಿಕೆಟಿಗ ರಿಷಬ್ ಪಂತ್ ವಿಚಾರವಾಗಿ ಆಗ್ಗಾಗ್ಗೆ ಸುದ್ದಿಯಲ್ಲಿರುತ್ತದೆ. ಮೊನ್ನೆಯಷ್ಟೇ ರಿಷಬ್ ಪಂತ್ ಹೈಟ್ ಬಗ್ಗೆ ಊರ್ವಶಿ ಟೀಕೆ ಮಾಡಿದ್ದರು. ಇದಕ್ಕೆ ಪಂತ್ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಈ ಟೀಕೆಯ ಕುರಿತಂತೆ ನಟಿ ಸ್ಪಷ್ಟನೆ ನೀಡಿದ್ದಾರೆ. ಅದು ಜಾಹೀರಾತು ಒಂದರ ಡೈಲಾಗ್. ಅದಕ್ಕೂ ನನಗೂ ಸಂಬಂಧವಿಲ್ಲ. ನಾನು ರಿಷಬ್ ಬಗ್ಗೆ ನೆಗೆಟಿವ್ ಆಗಿ ಮಾತನಾಡುವುದಿಲ್ಲ ಎಂದಿದ್ದರು.
ರಿಷಬ್ ಪಂತ್ ಜೊತೆ ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಈ ಮಧ್ಯೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಯಿತು. ನಟಿ ಊರ್ವಶಿ ಈ ಹಿಂದೆ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ ರಿಷಬ್ ಪಂತ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು ಎಂದಿದ್ದರು. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಬಗ್ಗೆ ಕ್ರಿಕೆಟಿಗ ರಿಷಬ್ ಕೂಡ ನಟಿಗೆ ಖಡಕ್ ಆಗಿ ತಿರುಗೇಟು ನೀಡಿದ್ದರು.