ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸದಾ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಲೆ ಇರುತ್ತಾರೆ. ಇತ್ತೀಚೆಗೆ ತಮ್ ಬಾತ್ ರೂಂ ವಿಡಿಯೋ ಹರಿಬಿಟ್ಟು ಸದ್ದು ಮಾಡಿದ್ದ ನಟಿ ಇದೀಗ ಆಸ್ಪತ್ರೆ ಸೇರಿದ್ದಾರೆ. ಆದರೆ ಆಸ್ಪತ್ರೆ ಸೇರಿರುವ ನಟಿಯ ಆರೋಗ್ಯ ವಿಚಾರಣೆ ಬದಲು ನೆಟ್ಟಿಗರು ಆಕೆಯನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಕಾರಣವಿಷ್ಟೇ..
ಆಸ್ಪತ್ರೆಯಲ್ಲಿ ಆಕ್ಸಿಜನ್ ಮಾಸ್ಕ್ ಧರಿಸಿರುವ ವೀಡಿಯೋವನ್ನ ಊರ್ವಶಿ ಪೋಸ್ಟ್ ಮಾಡಿ ತನಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದಾರೆ. ಊರ್ವಿಶಿ ಕೈಬೆರಳಿಗೆ ಸಣ್ಣದೊಂದು ಗಾಯವಾಗಿದೆ. ಇದೇ ಕಾರಣಕ್ಕೆ ಆಕೆ ಆಸ್ಪತ್ರೆಗೆ ಸೇರಿದ್ದಾಳೆ ಎನ್ನಲಾಗುತ್ತಿದೆ. ಚಿಕ್ಕ ಗಾಯಕ್ಕೆ ಆಸ್ಪತ್ರೆಗೆ ಅಡ್ಮಿಟ್ ಆಗಿ ಆಕ್ಸಿಜನ್ ಮಾಸ್ಕ್ ಹಾಕಿಕೊಂಡಿರೋ ಊರ್ವಶಿ ಟ್ರೋಲ್ ಆಗಿದ್ದು ಚಿಕ್ಕ ಗಾಯಕ್ಕೆ ಇಷ್ಟೊಂದು ಪಾಟಿ ಟ್ರೀಟ್ಮೆಂಟ್ ಅಗತ್ಯವಿತ್ತೇ ಎಂದು ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ವೀಡಿಯೋ ಹಂಚಿಕೊಂಡಿರುವ ಊರ್ವಶಿ ‘ನನಗಾಗಿ ಪ್ರಾರ್ಥಿಸಿ’ ಎಂಬ ಸಂದೇಶದೊಂದಿಗೆ ಗಾಯದ ವೀಡಿಯೋ ಜೊತೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ವೀಡಿಯೋ ಹಂಚಿಕೊಂಡಿದ್ದಾರೆ. ಅಸಲಿಗೆ ಊರ್ವಶಿ ಹಂಚಿಕೊಂಡ ವೀಡಿಯೋವನ್ನೇ ನೋಡಿದರೆ ಅದೊಂದು ಸಾಮಾನ್ಯ ಗಾಯದಂತೆ ಕಾಣುತ್ತೆ. ಇಂಥಹ ಸಣ್ಣಪುಟ್ಟ ಗಾಯಕ್ಕೆ ಆಸ್ಪತ್ರೆಗೆ ಹೋಗಿ ಬ್ಯಾಂಡೇಜ್ ಹಾಕೊಂಡು ಬರೋದೇ ದೊಡ್ಡದು. ಅಂಥದ್ರಲ್ಲಿ ಆಸ್ಪತ್ರೆಗೆ ದಾಖಲಾಗೋದ್ರ ಜೊತೆ ಆಕ್ಸಿಜನ್ ಮಾಸ್ಕ್ ಧರಿಸಿ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಏನಿತ್ತು ಎಂದಿದ್ದಾರೆ.
ನನಗಾಗಿ ಪ್ರಾರ್ಥಿಸಿ ಎಂದು ಕೇಳಿಕೊಂಡಿರುವ ಊರ್ವಶಿಗೆ ಓವರ್ ಆ್ಯಕ್ಟಿಂಗ್ ನಿಲ್ಲಿಸು ಎಂದು ಕಾಮೆಂಟ್ ಮಾಡಿದ್ದಾರೆ ನೆಟ್ಟಿಗರು. ಈ ಜಗತ್ತಿನಲ್ಲಿ ನಿಗಗೊಬ್ಬಳಿಗೇ ಇಂಥಹ ಗಂಭೀರ ಗಾಯವಾಗಿದ್ದು ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ. ಇನ್ನು ಅನೇಕರು ಇಂಥಹ ವೀಡಿಯೋ ಪೋಸ್ಟ್ ಮಾಡಿ ಏನು ಸಿಂಪತಿ ಗಿಟ್ಟಿಸಿಕೊಳ್ಳುವ ಕೆಲಸ ಮಾಡ್ಬೇಡ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.