ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ. ಇತ್ತೀಚೆಗೆ ನಟಿಯ ಖಾಸಗಿ ವಿಡಿಯೋವೊಂದು ಲೀಕ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಈ ಲೀಕ್ ಆದ ಬಾತ್ ರೂಂ ವಿಡಿಯೋ ಬಗ್ಗೆ ನಟಿ ಪ್ರತಿಕ್ರಿಯಿಸಿದ್ದಾರೆ.
ಊರ್ವಶಿ ರೌಟೇಲಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಕಷ್ಟು ಮಂದಿ ನೋಡುತ್ತಿರುತ್ತಾರೆ. ಅವರ ವಿಡಿಯೋಗಳು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ನಟಿಯ ಬಾತ್ ರೂಂ ವಿಡಿಯೋ ಲೀಕ್ ಆಗಿತ್ತು. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಹಂಚಿಕೊಂಡಿದ್ದಾರೆ. ಕೆಲವರು ಇದನ್ನು ಪಬ್ಲಿಸಿಟಿ ಸ್ಟಂಟ್ ಎಂದೂ ಕರೆಯುತ್ತಿದ್ದರು. ಇದೀಗ ಈ ವಿಡಿಯೋದ ಸತ್ಯವನ್ನು ನಟಿಯೇ ಬಾಯಿ ಬಿಟ್ಟಿದ್ದಾರೆ.
ವೈರಲ್ ಆಗಿರುವ ವಿಡಿಯೋ ನನ್ನ ವೈಯಕ್ತಿಕ ಕ್ಲಿಪ್ ಅಲ್ಲ. ಅದು ‘ಘುಷ್ಪಥಿಯಾ’ ಚಿತ್ರದ ದೃಶ್ಯವಾಗಿದೆ. ಯಾವುದೇ ಹುಡುಗಿಗೆ ಈ ರೀತಿ ಆಗಬಾರದು ಎಂದು ನಾನು ಯಾವಾಗಲೂ ಖಚಿತಪಡಿಸುತ್ತೇನೆ ಎಂದಿದ್ದಾರೆ. ಸದ್ಯ ಊರ್ವಶಿ ತನ್ನ ಮುಂಬರುವ ಚಿತ್ರ Ghuspaithiyaದಲ್ಲಿ ಬ್ಯುಸಿಯಾಗಿದ್ದಾರೆ. ಪೋಸ್ಟ್ ಅನ್ನು ತನ್ನ ಅಧಿಕೃತ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ . ಈ ಪೋಸ್ಟ್ನಲ್ಲಿ ಊರ್ವಶಿ ರೌಟೇಲಾ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಜೊತೆಗೆ, ನಟಿ ಇಲ್ಲಿ ಯಾರೂ ಸುರಕ್ಷಿತವಾಗಿಲ್ಲ, ನಾವೂ ಅಲ್ಲ, ನೀವೂ ಅಲ್ಲ, ನಮ್ಮ ರಹಸ್ಯಗಳೂ ಅಲ್ಲ ಎಂಬ ಶೀರ್ಷಿಕೆಯನ್ನು ನೀಡಿದ್ದರು.