ಬಾಲಿವುಡ್ ಬ್ಯೂಟಿ ನಟಿ ಊರ್ವಶಿ ರೌಟೇಲಾ ಸದಾ ಒಂದಲ್ಲಾ ಒಂದು ವಿಚಾರವಾಗಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಇತ್ತೀಚೆಗೆ ಕಾನ್ಸ್ ಫೆಸ್ಟಿವಲ್ನಲ್ಲಿ ದೀಪಿಕಾ ಪಡುಕೋಣೆ ಸ್ಟೈಲ್ ಅನ್ನು ಕಾಪಿ ಮಾಡಿದ್ದಾರೆ ಎಂಬ ಕಾರಣಕ್ಕೆ ಊರ್ವಶಿ ಸಖತ್ ಟ್ರೋಲ್ ಆಗಿದ್ದರು. ಇದೀಗ ಇದಕ್ಕೆ ಉತ್ತರಿಸಿದ ನಟಿ ಟ್ರೋಲ್ ಮಾಡುವವರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ ಟ್ರೋಲ್ ಗಳನ್ನು ಯಾವ ರೀತಿಯಲ್ಲಿ ಎದುರಿಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಮೊದಲು ಟ್ರೋಲ್ ಅನ್ನು ನಿಭಾಯಿಸುವುದನ್ನು ಅರಿತಿರಬೇಕು ಎಂದಿದ್ದಾರೆ. ಅಲ್ಲದೇ ನನ್ನ ಬಿಡುವಿಲ್ಲದ ಶೆಡ್ಯೂಲ್ನಲ್ಲಿ ಇದರ ಬಗ್ಗೆ ಯೋಚನೆ ಮಾಡಲು ಕೂಡ ಸಮಯ ಇಲ್ಲ ಎಂದಿದ್ದಾರೆ.
ನೀವು ಟ್ರೋಲ್ ಬಗ್ಗೆ ಗಮನ ಕೊಡದೇ ಇದ್ದಾಗ, ಟ್ರೋಲ್ ಆಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಈ ಮೂಲಕ ತಾವು ಟ್ರೋಲ್ ಬಗ್ಗೆ ಚಿಂತೆ ಮಾಡಲ್ಲ ಎಂದು ಟ್ರೋಲಿಗರಿಗೆ ನಟಿ ತಿರುಗೇಟು ನೀಡಿದ್ದಾರೆ.