ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬಾಲಿವುಡ್ ಬ್ಯೂಟಿ ನಟಿ ಊರ್ವಶಿ ರೌಟೇಲಾ ಬೆಕ್ಕಿನ ನಡಿಗೆಯಲ್ಲಿ ಅಲ್ಲಿದ್ದವರ ಕಣ್ಣು ಕಕ್ಕುವಂತೆ ಕಾಣಿಸಿಕೊಂಡಿದ್ದಾರೆ.
ಊರ್ವಶಿ ರೌಟೇಲಾ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ತನ್ನ ಸ್ಟೈಲ್ ನಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಸೆಳೆದಿರುವ ನಟಿಯ ಕೇನ್ಸ್ ಫಿಸ್ಟಿವಲ್ ಲುಕ್ ಗೆ ಎಲ್ಲರು ಫಿದಾ ಆಗಿದ್ದಾರೆ.
ಕೇನ್ಸ್ ಚಲನಚಿತ್ರೋತ್ಸವದ ಮೊದಲ ದಿನವೇ ಊರ್ವಶಿ ರೌಟೇಲಾ ಕೂಡ ರೆಡ್ ಕಾರ್ಪೆಟ್ ಮೇಲೆ ಎಂಟ್ರಿ ಕೊಟ್ಟಿದ್ದಾರೆ. ನಟಿ ಊರ್ವಶಿ ರೌಟೇಲಾ ಅವರ ಲುಕ್ ಎಲ್ಲರ ಗಮನ ಸೆಳೆದಿದೆ. ನಟಿಯ ಗುಲಾಬಿ ಬಣ್ಣದ ದಿರಿಸು ನೋಡಿ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ.
ನಟಿ ಊರ್ವಶಿ ರೌಟೇಲಾ ರೋಸ್ ಕಲರ್ ಹೈ ಥಾಯ್ ಸ್ಲಿಟ್ ಗೌನ್ ಧರಿಸಿದ್ದರು. ರೋಸ್ ಕಲರ್ ಡ್ರೆಸ್ ನಲ್ಲಿ ನಟಿ ಊರ್ವಶಿ ಬಾರ್ಬಿ ಗೊಂಬೆಯಂತೆ ಮುದ್ದಾಗಿ ಕಾಣುತ್ತಿದ್ದಾರೆ. ಊರ್ವಶಿ ಚೆಂದದ ಮೇಕಪ್ ನೊಂದಿಗೆ ಇನ್ನು ಅಂದವಾಗಿ ಕಾಣ್ತಿದ್ದಾರೆ. ಆದರೆ, ಊರ್ವಶಿಯ ಈ ಲುಕ್ ನೋಡಿ ಕೆಲವರಿಗೆ ದೀಪಿಕಾ ಪಡುಕೋಣೆ ನೆನಪಾಗುತ್ತಿದ್ದಾರೆ.
ದೀಪಿಕಾ ಪಡುಕೋಣೆ ಕೇನ್ಸ್ ಫಿಲ್ಮ್ ಫೆಸ್ಟಿವಲ್ 2018 ರಲ್ಲಿ ಇದೇ ರೀತಿಯ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಊರ್ವಶಿ ರೌಟೇಲಾ ಅವರ ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಊರ್ವಶಿ ರೌಟೇಲಾ ದೀಪಿಕಾ ಪಡುಕೋಣೆ ಸ್ಟೈಲ್ ಅನ್ನು ಕಾಪಿ ಮಾಡಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಊರ್ವಶಿ ರೌಟೇಲಾ ಕೇನ್ಸ್ 2024 ರಲ್ಲಿ ತಮ್ಮ ಮಾದಕ ನೋಟದಿಂದ ಇಂಟರ್ನೆಟ್ನಲ್ಲಿ ಸೆನ್ಸೇಶನ್ ಹುಟ್ಟು ಹಾಕಿದ್ದಾರೆ. ಬಾಲಿವುಡ್ ನಟಿ ಸತತ ಮೂರನೇ ವರ್ಷ ಕ್ಯಾನೆಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ರೆಡ್ ಕಾರ್ಪೆಟ್ನಲ್ಲಿ ಸಂಚಲನ ಮೂಡಿಸಿದ ಪಿಂಕ್ ಫ್ಯಾಶನ್ ಗೌನನ್ನು ಖ್ಯಾತರಾದ ಖಲೀದ್ ಮತ್ತು ಮರ್ವಾನ್ ವಿನ್ಯಾಸಗೊಳಿಸಿದ್ದಾರೆ.
ಕೆನ್ಸ್ ಫಿಲ್ಮ್ ಫೆಸ್ಟಿವಲ್ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪಿಂಕ್ ಬಣ್ಣದ ಗೌನ್ನೊಂದಿಗೆ ದೊಡ್ಡ ರೆಕ್ಕೆಯಂಥ ರಫೆಲ್ ಫ್ಯಾಶನ್, ತೆರೆದ ತೊಡೆ, ಕೈಗೆ ಪಿಂಕ್ ಗ್ಲೌಸ್, ಪಿಂಕ್ ಹೀಲ್ಸ್, ತಲೆಗೆ ಪಿಂಕ್ ಹೇರ್ಬ್ಯಾಂಡ್ ಧರಿಸಿ ನಟಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.
ಊರ್ವಶಿ ರೌಟೇಲಾ 2022ರಲ್ಲಿ ತನ್ನ ತಮಿಳು ಚೊಚ್ಚಲ ಚಿತ್ರ ದಿ ಲೆಜೆಂಡ್ನ ಪೋಸ್ಟರ್ ಬಿಡುಗಡೆಗಾಗಿ ಮೊದಲ ಬಾರಿ ಕೇನ್ಸ್ನಲ್ಲಿ ಭಾಗವಹಿಸಿದರು.