ವಾಷಿಂಗ್ಟನ್: ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ದೂರವಾಣಿ ಕರೆಯ ಮೂಲಕ ಪೋಪ್ ಫ್ರಾನ್ಸಿಸ್ ಅವರಿಗೆ ಅಧ್ಯಕ್ಷೀಯ `ಸ್ವಾತಂತ್ರ್ಯ ಪದಕ’ ಪ್ರದಾನ ಮಾಡಿದರು ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾಗಿ ವರದಿಯಾಗಿದೆ.
ಜೋ ಬೈಡನ್ ಅಧ್ಯಕ್ಷರಾಗಿ ತನ್ನ ಕೊನೆಯ ಸಾಗರೋತ್ತರ ಪ್ರವಾಸವಾಗಿ ರೋಮ್ಗೆ ಭೇಟಿ ನೀಡಿ ಪೋಪ್ ಫ್ರಾನ್ಸಿಸ್ಗೆ ವೈಯಕ್ತಿಕವಾಗಿ ಪದಕ ಪ್ರದಾನ ಮಾಡುವ ಕಾರ್ಯಕ್ರಮವಿತ್ತು. ಆದರೆ ಲಾಸ್ ಏಂಜಲೀಸ್ನಲ್ಲಿ ಹರಡುತ್ತಿರುವ ಭೀಕರ ಕಾಡ್ಗಿಚ್ಚಿನ ನಿಯಂತ್ರಣ ಕಾರ್ಯದ ಮೇಲೆ ನಿಗಾ ವಹಿಸಬೇಕಿರುವುದರಿಂದ ರೋಮ್ ಪ್ರವಾಸ ರದ್ದಾಗಿದೆ. ಹೀಗಾಗಿ ದೂರವಾಣಿ ಕರೆಯ ಮೂಲಕವೇ ಪ್ರಶಸ್ತಿ ಪ್ರದಾನ ಮಾಡಿದರು ಎಂದು ಶ್ವೇತಭವನದ ಹೇಳಿಕೆ ನೀಡಿದೆ.