ವಾಷಿಂಗ್ಟನ್ : ಕೋವಿಡ್ ಸೋಕಿಗೆ ಒಳಗಾಗಿದ್ದ ಮಹಿಳೆಯೊಬ್ಬರು ಬರೋಬ್ಬರಿ ಎರಡು ವರ್ಷಗಳ ಬಳಿಕ ವಾಸನೆ ಗ್ರಹಿಸುವ ಶಕ್ತಿಯನ್ನು ಮರಳಿ ಪಡೆದುಕೊಂಡಿದ್ದಾರೆ.
ಅಮೆರಿಕ ಮೂಲದ ಜೆನ್ನಿಫರ್ ಎಂಬ ಮಹಿಳೆ ಎರಡು ವರ್ಷ ದೀರ್ಘ ಕಾಲದ ಬಳಿಕ ವಾಸನೆ ಗ್ರಹಿಸುವ ಶಕ್ತಿಯನ್ನು ಮರಳಿ ಪಡೆದಿದ್ದಾಳೆ.
ಕ್ಲೆವೆಲ್ಯಾಂಡ್ ಕ್ಲಿನಿಕ್ನ ಇನ್ಸ್ಟಾಗ್ರಾಂನಲ್ಲಿ ಮಹಿಳೆ ಪ್ರತಿಕ್ರಿಯಿಸಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಒಂದು ಕಾಫಿ ಕಪ್ ಎತ್ತಿಕೊಂಡು ವಾಸನೆ ಗ್ರಹಿಸಿದ್ದಾಳೆ. ನಂತರ ನನಗೆ ವಾಸನೆ ಗ್ರಹಿಸಲು ಸಾಧ್ಯವಾಗುತ್ತಿದೆ ಎಂದು ಗದ್ಗದಿತಳಾಗಿ ನುಡಿದಿದ್ದಾರೆ.
ಎರಡು ವರ್ಷಗಳ ಕಾಲ ಆಹಾರ ನನಗೆ ರುಚಿಸುತ್ತಿರಲಿಲ್ಲ. ವಾಸನೆಯ ಅರಿವಾಗುತ್ತಿರಲಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದು, ಸಾಮಾನ್ಯ ಚಿಕಿತ್ಸೆಗಾಗಿ ಬಳಸುವ ಸ್ಟೇಲೆಟ್ ಗ್ಯಾಂಗ್ಲಿಯಾನ್ ಬ್ಲಾಕ್ ಇಂಜೆಕ್ಷನ್ ನೀಡಿದ ಮೇಲೆ ಮಹಿಳೆ ಮೊದಲ ಬಾರಿಗೆ ವಾಸನೆ ಹಾಗೂ ರುಚಿಯನ್ನು ಗ್ರಹಿಸಿದ್ದಾರೆ.