ಡೆಹ್ರಾಡೂನ್: ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿ (Uttarkashi) ಸುರಂಗದಲ್ಲಿ (Tunnel) ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ (Rescue operation) ಇಂದಿಗೆ 13ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ತಡರಾತ್ರಿ ತಾಂತ್ರಿಕ ಅಡಚಣೆಯಿಂದಾಗಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯ ವಿಳಂಬವಾಗಿದೆ.
ಸಿಲ್ಕ್ಯಾರಾ ಸುರಂಗದ ಕಡೆಯಿಂದ ಅಮೆರಿಕನ್ ಆಗುರ್ ಯಂತ್ರವನ್ನು ಬಳಸಿ ಕೊರೆಯುವ ಕೆಲಸ ನಡೆಯುತ್ತಿತ್ತು. ರಕ್ಷಣಾ ತಂಡ ಇಲ್ಲಿಯವರೆಗೆ ಸುಮಾರು 46.8 ಮೀ. ವರೆಗೆ ಕೊರೆದಿದ್ದಾರೆ. ಆದರೆ ಗುರುವಾರ ತಡರಾತ್ರಿ ಮತ್ತೊಂದು ತಾಂತ್ರಿಕ ಅಡಚಣೆ ಉಂಟಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.