ಅರಿಶಿಣದ ಪುಡಿ ಹಾಗು ಅರಿಶಿಣದ ಕೊಂಬು ಎಲ್ಲಾ ಸಂದರ್ಭಗಳಲ್ಲೂ ಎಲ್ಲಾ ವಯಸ್ಸಿನ ಮಹಿಳೆಯರ ಸೌಂದರ್ಯ ರಕ್ಷಕ ಸಾಮಗ್ರಿಯಾಗಿ ಬಳಕೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕಸ್ತೂರಿ ಅರಿಶಿಣಕ್ಕೆ ವಿಶೇಷವಾದ ಸ್ಥಾನವೇ ಇದೆ. ಇದರ ಬಳಕೆಯಿಂದ ಮುಖದ ಅಂದವನ್ನು ಹೆಚ್ಚಿಸಿಕೊಳ್ಳ ಬಹುದು.
ಕಸ್ತೂರಿ ಅರಿಶಿಣವು ಪುಡಿ ಹಾಗು ಚಕ್ಕೆಯ ರೂಪದಲ್ಲಿಯೂ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಒಂದು ಚಮಚ ಕಸ್ತೂರಿ ಅರಿಶಿಣವನ್ನು ಸ್ವಲ್ಪ ಹಸಿ ಹಾಲಿನೊಂದಿಗೆ ಬೆರೆಸಿ. ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತಣ್ಣಿರಿನಲ್ಲಿ ಮುಖ ತೊಳೆಯುವುದರಿಂದ ಕಪ್ಪು ಕಲೆಗಳು ಕ್ರಮೇಣ ಮಾಯವಾಗುತ್ತವೆ ತ್ವಚೆ ಕಾಂತಿಯುತವಾಗುತ್ತದೆ.
ಶ್ರೀಗಂಧದೊಂದಿಗೆ ಸ್ವಲ್ಪ ಕಸ್ತೂರಿ ಅರಿಶಿನಪುಡಿ, ಜೇನು ತುಪ್ಪ ಸೇರಿಸಿ. ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷದ ನಂತರ ನಿಧಾನವಾಗಿ ಬೆರಳುಗಳೀಂದ ಮಸಾಜ್ ಮಾಡಿದರೆ ಬೇಡದ ರೋಮಗಳು ಕ್ರಮೇಣ ಉದುರುತ್ತವೆ. ಮುಖದ ತ್ವಚೆ ಮ್ಯದುವಾಗುತ್ತದೆ.