ಚರ್ಮ ಹಾನಿಗೊಳಗಾದಾಗ ತ್ವಚೆ ಕುಂದಿದಂತೆ ಕಾಣುತ್ತದೆ, ಅರಿಶಿನ ಸೂರ್ಯನ ಯುವಿ ಕಿರಣಗಳಿಂದ ಚರ್ಮಕ್ಕಾಗುವ ಹಾನಿಯನ್ನು ತಡೆದು ವಯಸ್ಸಾದಂತೆ ಕಾಣುವುದನ್ನು ಕೂಡ ತಡೆಯುತ್ತದೆ. ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿರುವ ಅರಿಶಿಣವನ್ನು ಕಲೆ ಮತ್ತು ತ್ವಚೆ ಸುಕ್ಕುಗಟ್ಟುವುದನ್ನು ತಡೆದು ವಯಸ್ಸಾದಂತೆ ಕಾಣುವುದನ್ನು ತಪ್ಪಿಸುತ್ತದೆ.
ಇದರಲ್ಲಿರುವ ಆಯಂಟಿ ಇನ್ಫ ಮೇಟರಿ ಗುಣ ನಿಯಮಿತ ಬಳಕೆಯಿಂದ ತ್ವಚೆ ಹೊಳಪನ್ನು ಹೆಚ್ಚಿಸುತ್ತದೆ. ಯಾವುದೇ ರೀತಿಯ ಸಣ್ಣ ಗಾಯ , ಸುಟ್ಟ ಗಾಯ ಅರಿಶಿಣ ಬಳಸುವುದರಿಂದ ಬೇಗ ಗುಣವಾಗಲು ಸಹಾಯಕವಾಗುತ್ತದೆ. ನಿಮ್ಮ ಚರ್ಮದ ಹೊಳಪನ್ನು ಕಾಪಾಡಬಲ್ಲ ಆಯಿಲ್ಗಳು.
ಆಲ್ಮಂಡ್ ಆಯಿಲ್: ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಎ ಅಂಶವಿದ್ದು, ಮುಖದಲ್ಲಿ ಸುಕ್ಕುಗಟ್ಟುವಿಕೆ, ಚರ್ಮ ಒಣಗುವುದನ್ನು ತಪ್ಪಿಸಿ ಕಾಂತಿಯನ್ನು ಮರುಕಳಿಸುತ್ತದೆ.
ತೆಂಗಿನ ಎಣ್ಣೆ: ತ್ವಚೆಯ ರಕ್ಷಣೆಯಲ್ಲ್ಲ ಆಂಟಿಆಕ್ಸಿಡೆಂಟ್ ನಿರ್ಣಾಯಕ ಪಾತ್ರ ವಹಿಸುತ್ತದೆ ಬಹುತೇಕ ಫೇಸ್ ಕ್ರೀಂಗಳಲ್ಲಿರುವ ಆಂಟಿ ಆಕ್ಸಿಡೆಂಟ್ ತೆಂಗಿನ ಎಣ್ಣೆಯಲ್ಲೂ ಇದೆ. ಹೀಗಾಗಿ ಸೌಂದರ್ಯಪ್ರಿಯರು ಮುಖಕ್ಕೆ ತೆಂಗಿನ ಎಣ್ಣೆ ಹಚ್ಚುವ ಮೂಲಕ ನೈಸರ್ಗಿಕವಾಗಿ ಅಂದವನ್ನು ಹೆಚ್ಚಿಸಿಕೊಳ್ಳಬಹುದು.
ಆವಕಾಡೋ ಎಣ್ಣೆ: ಆವಕಾಡೋ ಎಣ್ಣೆಯಲ್ಲಿ ವಿಟಮಿನ್ ಸಿ ಹಾಗೂ ವಿಟಮಿನ್ ಇ ಅಂಶಗಳು ತ್ವಚೆಗೆ ಆಂತರಿಕವಾಗಿ ಪೋಷಣೆ ನೀಡುವ ಮೂಲಕ ಬಾಹ್ಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆವಕಾಡೊನಲ್ಲಿರುವ ಲುಟೀನ್ ಹಾಗೂ ಜಿಯಾಕ್ಸೆಂಥೀನ್ ಪದಾರ್ಥಗಳು ಸೂರ್ಯನ ಅತಿ ನೇರಳೆ ಕಿರಣಗಳಿಂದ ಚರ್ಮಕ್ಕೆ,
ಆಗುವ ಹಾನಿಯನ್ನು ತಡೆಗಟ್ಟುವ ಶಕ್ತಿಯನ್ನು ಹೊಂದಿದ್ದು, ವಯಸ್ಸಾಗುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ. ಆವಕಾಡೊ ಹಣ್ಣು ಇದನ್ನು ಕನ್ನಡದಲ್ಲಿ ಬೆಣ್ಣೆ ಹಣ್ಣು ಎಂದು ಕರೆಯಲಾಗುತ್ತದೆ. ತಿನ್ನಲು ಬಲು ರುಚಿಯಾಗಿರುವ ಇದು ಆರೋಗ್ಯಕ್ಕೆ ತುಂಬಾ ಒಳ್ಳೆ
ನಮ್ಮ ತ್ವಚೆಯ ಆರೋಗ್ಯ ಕಾಪಾಡಲು ಇದನ್ನು ಬಹು ವಿಧಾನದಲ್ಲಿ ಬಳಸಬಹುದಾಗಿದೆ. ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಆವಕಾಡೊ ಹಣ್ಣನ್ನು ಸೂಪರ್ ಫುಡ್ ಎಂದು ವರ್ಗೀಕರಿಸಲಾಗಿದ್ದು, ತ್ವಚೆಯ ಆರೋಗ್ಯ ಕಾಪಾಡಲು ಇದನ್ನು ಬಳಸಲಾಗುತ್ತದೆ.