ಬೆಂಗಳೂರು: ಆಟೋ ಚಾಲಕರ ಪಾಲಿಗೆ ಪ್ರಯಾಣಿಕರೇ ದೇವರು.. ಆದರೆ ಕೆಲವರು ಕನ್ನಡ ಭಾಷೆ ಬಾರದ ಪ್ರಯಾಣಿಕರು ಸಿಕ್ಕರೆ ಸಾಕು ಸುಲಿಗೆಗೆ ಇಳಿದು ಬಿಡ್ತಾರೆ.. ಹಣಕಾಸಿನ ವಿಚಾರದಲ್ಲಿ ಆಟೋ ಚಾಕಲ ಮತ್ತು ಪ್ರಯಾಣಿಕರ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿದೆ..
ಈ ಫೋಟೋದಲ್ಲಿ ಕಾಣ್ತಿರೋ ವ್ಯಕ್ತಿಯ ಹೆಸರು ಅಹಮದ್.. ಮೂಲತಃ ಒರಿಸ್ಸಾದವನು.. ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದ.. ಈತ ಮತ್ತು ಈತನ ಸ್ನೇಹಿತ ಆಯೂಬ್ ಇಬ್ಬರು ಸಂಬಂಧಿಕನೊಬ್ಬನನ್ನು ಕರೆದುಕೊಂಡು ಹೋಗಲು ಮೆಜೆಸ್ಟಿಕ್ ನಿಂದ ಆಟೋವನ್ನ ಹತ್ತಿದ್ದಾರೆ.. ಆದರೆ ಸಂಬಂಧಿಕ ಎಲ್ಲಿ ಇಳಿಯಬಹುದು ಎಂಬ ಕನ್ಫೂಸ್ ಆಗಿದ್ದಾರೆ.. ಅಷ್ಟೇ ಆಟೋ ಚಾಲಕ ಅಶ್ವಥ್ ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಬಿಡಲು ಪ್ರಯಾಣಿಕರ ಬಳಿ ಹೆಚ್ಚು ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ.. ಆದರೆ ಹಣ ನೀಡಲು ಪ್ರಯಾಣಿಕ ನಿರಾಕರಿಸಿದ್ದೆ ಪ್ರಯಾಣಿಕ ಅಹಮದ್ ಮತ್ತು ಆಯೂಬ್ ಮೇಲೆ ಹಲ್ಲೆ ನಡೆಸಿದ್ದಾನೆ.. ಇದರಿಂದ ಆಯೂಬ್ ಕಾಲಿಗೆ ಪೆಟ್ಟು ಬಿದ್ದಿದ್ರೆ.. ಅಹಮದ್ ಗಂಭೀರವಾಗಿ ಗಾಯಗೊಂಡಿದ್ದಾನೆ.. ಅಹಮದ್ ನನ್ನು ಆಸ್ಪತ್ರೆಗೆ ಸಾಗಿಸಿದರಾದ್ರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ
ಆಟೋ ಚಾಲಕರು ತಮ್ಮ ವಾಹನದಲ್ಲಿ ಡಿಸ್ಪೇ ಕಾರ್ಡ್ ಹಾಕಬೇಕು ಆದರೆ ಅಶ್ವಥ್ ಯಾವುದೇ ಡಿಸ್ಲೇ ಕಾರ್ಡ್ ಹಾಕಿರಲಿಲ್ಲ.. ಇನ್ನು ಈತ ಮೂಲತಃ ಹಾಸನದ ಹೊಳೆನರಸೀಪುರದವನಾಗಿದ್ದು ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವಾಸವಾಗಿದ್ದ.. ಈತನ ಮೇಲೆ ಹಾಸನ , ಉಪ್ಪಾರಪೇಟೆ ಸೇರಿದಂತೆ ಹಲವೆಡೆ ಪ್ರಕರಣಗಳು ದಾಖಲಾಗಿದ್ದು ಈತ ಹಳೇಯ MOB ಆಗಿದ್ದಾನೆ ಎಂದು ತಿಳಿದುಬಂದಿದೆ..
ಕೆಲವು ಆಟೋ ಚಾಲಕರು ಮೀಟರ್ ಹಾಕದೇ ಜನರ ಬಳಿ ಹಗಲು ದರೋಡೆ ನಡೆಸುತ್ತಿದ್ದಾರೆ.. ಇನ್ನು ಕೆಲವು ಆಟೋ ಚಾಲಕರು ದುರ್ವರ್ತನೆ ಮತ್ತು ಹೆಚ್ಚು ಹಣಕ್ಕಾಗಿ ಡಿಮ್ಯಾಂಡ್ ಮಾಡಿ ಕಿರಿಕಿರಿಮಾಡ್ತರೆ.. ಇಂಥವರ ವಿರುದ್ದ ದೂರು ನೀಡಲು ಆಟೋ ಹೆಲ್ಪ್ ಲೈನ್ ನಂಬರ್ 080 22868550
080 22943381 ಕರೆ ಮಾಡಬಹುದಾಗಿದೆ.. ಅದೇನಾದ್ರು ಆಟೋ ಚಾಲಕ ಹಣಕ್ಕಾಗಿ ಪ್ರಯಾಣಿಕನ ಹೆಣ ಕೆಡವಿವಿದ್ದು ದುರಂತವೇ ಸರಿ.