ಬೆಂಗಳೂರು:- ಸಿಲಿಕಾನ್ ಸಿಟಿಯಲ್ಲಿ ಆ ರಾತ್ರಿ ನಡೆದಿತ್ತು ಫಾರಿನ್ ಲೇಡಿಯ ಮರ್ಡರ್. ಬ್ಯೂಸಿನೆಸ್ ವಿಚಾರಕ್ಕೆ ಬೆಂಗಳೂರಿಗೆ ಬಂದಿದ್ದ ಆಕೆ ಆಕೆ ಬಂದಿದ್ದ ಹೋಟೆಲ್ನಲ್ಲೇ ಆವತ್ತು ಬರ್ಬರವಾಗಿ ಕೊಲೆಯಾಗಿ ಹೋಗಿದ್ದಳು.
ಹೊಟೆಲ್ ಸಿಬ್ಬಂದಿ ರೂಮ್ ಒಳಗೆ ಎಂಟ್ರಿ ಕೊಟ್ಟಾಗ ಅವಳ ಡೆಡ್ ಬಾಡಿ ಪತ್ತೆಯಾಗಿತ್ತು.. ಇನ್ನೂ ತನಿಖೆ ನಡೆಸಿದ ಪೊಲೀಸರು ಘಟನೆ ನಡೆದು 24 ಗಂಟೆಗಳಲ್ಲೆ ಬಂಧಿಸಿದ್ದರು. ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆಗೆ ಇಳಿಯುತ್ತಾರೆ. ಎಲ್ಲಾ ಸಿಸಿ ಕ್ಯಾಮರಾ ದೃಶ್ಯಗಳನ್ನ ಪರಿಶೀಲಿಸುತ್ತಾರೆ. ಆದ್ರೆ ಯಾವುದೇ ಸಾಕ್ಷ್ಯ ಸಿಗೋದಿಲ್ಲ. ಹಾಗಾದ್ರೆ ಆ ವಿದೇಶಿ ಮಹಿಳೆಯನ್ನ ಯಾರು ಕೊಂದರು ಅಂತ ತಲೆಕೆಡಸಿಕೊಳ್ತಿರುವಾಗ್ಲೆ ಪೊಲೀಸರಿಗೆ ಒಂದು ಅನುಮಾನ ಮೂಡುತ್ತೆ. ಅದೇ ಅನುಮಾನ ಹಂತಕರನ್ನ 24 ಗಂಟೆಗಳಲ್ಲಿ ಬಂಧಿಸಲು ನೆರವಾಗುವಂತೆ ಮಾಡುತ್ತೆ. ಇತ್ತೀಚೆಗಷ್ಟೇ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ರು. ಆದ್ರೆ ಕೆಲಸ ಮಾಡೋದಕ್ಕಿಂತ ಹೆಚ್ಚಾಗಿ ಬರುವ ಗ್ರಾಹಕರ ಮೇಲೆನೇ ಕಣ್ಣಿಡ್ತಿದ್ರು. ಅವರು ಬಳಸೋ ಮೊಬೈಲ್ ,ಪರ್ಸ್ ಮೇಲೆಯೇ ಕಣ್ಣಿಡ್ತಿದ್ರು. ಆದ್ರೆ ಆವತ್ತು ನಲ್ಲಿ ರಿಪೇರಿ ಅಂತಾ ಆ ಕಿರಾತಕರು ಜರೀನಾ ಇದ್ದ ರೂಮ್ ಒಳಗೆ ಹೋದವರು ಮಾಡಬಾರದ್ದನ್ನ ಮಾಡಿ ಎಸ್ಕೇಪ್ ಆಗಿದ್ರು. ಆದರೆ ಬೆಂಗಳೂರಲ್ಲಿ ಕೊಲೆ ಮಾಡಿ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದ ಖದೀಮರನ್ನ ಖಾಕಿ ಖೆಡ್ಡಗೆ ಕೆಡವಿ ತನಿಖೆ ಕೈಗೊಂಡಿದೆ ಎನ್ನಲಾಗಿದೆ.