ನನ್ನ ಚರ್ಮ ಸುಲಿದು ಚಪ್ಪಲಿ ಮಾಡಿದರೂ ನಿಮ್ಮ ಋುಣ ತೀರಿಸಲು ಆಗುವುದಿಲ್ಲ ಎಂದು ವಿ.ಸೋಮಣ್ಣ ತುಮಕೂರು ಜನತೆಗೆ ಕೃತಜ್ಞತೆ ಸಲ್ಲಿಸಿದರು. ಕೃತಜ್ಞತೆ ಸಮಾರಂಭದಲ್ಲಿಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ-ಜನತಾದಳ ಒಂದಾದರೆ ಏನೆಲ್ಲಾಮಾಡಬಹುದು ಎಂಬುದನ್ನು ನೀವೆಲ್ಲಾ ತೋರಿಸಿದ್ದೀರಿ.
ನಿಮಗೆಲ್ಲಾ ಕೋಟಿ ಕೋಟಿ ನಮನಗಳು. ಮೂರು ತಿಂಗಳ ಹಿಂದೆ ನನಗೆ ಜಿಲ್ಲೆಗೆ ಸಂಬಂಧ ಇಲ್ಲ. 1.75 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ. ಹೊರಗಿನವರು ಎಂದು ಹೇಳುತ್ತಿದ್ದರೂ ಗೆಲ್ಲಿಸಿದ್ದೀರಿ ಎಂದು ಭಾವುಕರಾದರು.
ನಾನು ಕೇಂದ್ರ ಸಚಿವನಾಗುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಯಾರಿಗೂ ನಮಸ್ಕಾರ ಹೊಡೆಯಲಿಲ್ಲ. ಕ್ಯೂನಲ್ಲಿ ಹೋಗಬೇಕಾದರೆ ಪ್ರಧಾನಿಯವರು ಕೂಗಿ ಆಪ್ ಕೋ ಡಬಲ್ ಕಂಗ್ರ್ಯಾಜ್ಯೂಲೇಷನ್ ಅಂತ ಹೇಳಿದರು. ತುಮಕೂರು ಜಿಲ್ಲೆಯ ಮತದಾರರ ಆಶೀರ್ವಾದದಿಂದ ಸಚಿವ ಸ್ಥಾನ ಬಯಸದೆ ಬಂದ ಭಾಗ್ಯ ಎಂದರು.