ಗಣೇಶ್ ನಟನೆಯ ಗಾಳಿಪಟ 2, ಧ್ರುವ ಸರ್ಜಾ ನಟನೆ ಮಾರ್ಟಿನ್ ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ವೈಭವಿ ಶಾಂಡಿಲ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹು ಕಾಲದ ಗೆಳೆಯ ಫಿಲ್ಮ್ ಮೇಕರ್ ಆಗಿರುವ ಹರ್ಷವರ್ಧನ್ ಅವರ ಜೊತೆ ನಟಿ ಹಸೆಮಣೆ ಏರಿದ್ದಾರೆ.
ನಟಿ ವೈಭವಿ ಶಾಂಡಿಲ್ಯ ಹಾಗೂ ಹರ್ಷವರ್ಧನ್ ಅವರು ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದು ಇದೀಗ ಎರಡು ಕುಟುಂಬಸ್ಥರ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ನಡೆದ ವಿವಾಹ ಸಂಭ್ರಮದಲ್ಲಿ ಗುರು, ಹಿರಿಯರು, ಎರಡು ಕಡೆಯ ಕುಟುಂಬಸ್ಥರು, ಸ್ನೇಹಿತರು ಹಾಗೂ ಗಣ್ಯರ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿರುವ ವೈಭವಿ ಶಾಂಡಿಲ್ಯ, ನಮ್ಮ ಕುಟುಂಬ ಹಾಗೂ ಗುರು, ಹಿರಿಯರು, ಸ್ನೇಹಿತರ ಆಶೀರ್ವಾದದೊಂದಿಗೆ, ಹರ್ಷವರ್ಧನ್ ಜೊತೆ ಸುಂದರ ಪ್ರಯಾಣ ಆರಂಭವಾಗಿದೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕಾಗಿ ನಾನು ಕೃತಜ್ಞರಾಗಿರುತ್ತೇನೆ. ಸಂತೋಷವಾಗಿರಲಿ.. ಎಂದು ಹಾರೈಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವೈಭವಿ ಶಾಂಡಿಲ್ಯ ಅವರು ಮೂಲತಹ ಮಹಾರಾಷ್ಟ್ರದವರು. 1994ರ ಮೇ 27 ರಂದು ಮುಂಬೈನಲ್ಲಿ ಜನಿಸಿದ ವೈಭವಿ, 2015ರಲ್ಲಿ ಮರಾಠಿಯ ಜನಿವಾ ಎನ್ನುವ ಮೂವಿ ಮೂಲಕ ಸಿನಿ ಪ್ರಯಾಣ ಆರಂಭಿಸುತ್ತಾರೆ. ಮರಾಠಿ ಜೊತೆಗೆ ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಅಭಿನಯ ಮಾಡಿ ಖ್ಯಾತಿ ಗಳಿಸಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ರಾಜ್ ವಿಷ್ಣು ಸಿನಿಮಾ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ನಟ ಆ ನಂತರ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸಿನಿಮಾದಲ್ಲಿ ನಟಿಸಿದರು. ನಿರ್ದೇಶಕ ಎ.ಪಿ ಅರ್ಜುನ್ ಹಾಗೂ ಆ್ಯಕ್ಷನ್ ಫಿನ್ಸ್ ಧ್ರುವ ಸರ್ಜಾ ಕಾಂಬಿನೇಷನ್ ಮಾರ್ಟಿನ್ ಸಿನಿಮಾದಲ್ಲಿ ನಾಯಕಿ ಆಗಿ ಅಭಿನಯಿಸಿದ್ದರು.
