PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ಓಲಾ ಶೇರಿಂಗ್, ಉಬರ್ ಪೂಲಿಂಗ್‌ʼಗೆ ಅವಕಾಶ ನೀಡಲು ಸಂಸದರ ಪಟ್ಟು: ಕೆರಳಿದ ಖಾಸಗಿ ಸಾರಿಗೆ ಚಾಲಕರು

October 2, 2023

BMTC ನೌಕರರಿಗೆ ಗುಡ್ ನ್ಯೂಸ್: ಡಿಪೋಗಳಲ್ಲೇ ಊಟ ತಿಂಡಿ ಒದಗಿಸುವ ಕ್ಯಾಂಟೀನ್‌ ಆರಂಭ!

October 2, 2023

ಗಾಂಧಿಜೀ ಅವರ ಕನಸಾದ ಸ್ವಚ್ಛ ಭಾರತ ಕನಸನ್ನ ನನಸು ಮಾಡಬೇಕಿದೆ: ಗ್ರಾ.ಪಂ.ಅಧ್ಯಕ್ಷ ಅಶೋಕ್

October 2, 2023
Facebook Twitter Instagram
Monday, October 2
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ಕೋಮಲ್ ನಟನೆಯ ‘ಯಲಾಕುನ್ನಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ವಜ್ರಮುನಿ ಮೊಮ್ಮಗ ಎಂಟ್ರಿ
ಚಲನಚಿತ್ರ Prajatv KannadaBy Prajatv KannadaMarch 28, 2023

ಕೋಮಲ್ ನಟನೆಯ ‘ಯಲಾಕುನ್ನಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ವಜ್ರಮುನಿ ಮೊಮ್ಮಗ ಎಂಟ್ರಿ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಸಾಕಷ್ಟು ಸಮಯದಿಂದ ಸಿನಿಮಾಗಳಿಂದ ದೂರವಿದ್ದ ನಟ ಕೋಮಲ್ ಇದೀಗ ಕಂಬ್ಯಾಕ್ ಮಾಡಿದ್ದಾರೆ. ಹೊಸ ಹೊಸ ಪಾತ್ರಗಳಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಕೋಮಲ್ ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ  ನಟಿಸುತ್ತಿದ್ದಾರೆ. ಚಿತ್ರಕ್ಕೆ ‘ಯಲಾ ಕುನ್ನಿ’ ಎಂದು ಟೈಟಲ್ ಇಡಲಾಗಿದ್ದು, ವಿಜಯನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಚಿತ್ರದ ಮುಹೂರ್ತ ನೆರವೇರಿದೆ.

‘ಯಲಾ ಕುನ್ನಿ’ಚಿತ್ರಕ್ಕೆ  ಕನ್ನಡ ಚಿತ್ರರಂಗದ ದಂತಕಥೆ ವಜ್ರಮುನಿ ಕುಟುಂಬದ ಎಲ್ಲ ಸದಸ್ಯರು ಆಗಮಿಸಿ ಚಿತ್ರಕ್ಕೆ ಶುಭ ಕೋರಿದ್ದು ವಿಶೇಷವಾಗಿತ್ತು. ವಜ್ರಮುನಿರವರ ಪತ್ನಿ  ಲಕ್ಷ್ಮೀ ವಜ್ರಮುನಿ ಕ್ಯಾಮರಾ ಚಾಲನೆ ಮಾಡಿದರೆ, ಮೊದಲ ಸನ್ನಿವೇಶಕ್ಕೆ  ವಜ್ರಮುನಿ ಅವರ ಹಿರಿಯ ಪುತ್ರ ವಿಶ್ವನಾಥ್ ಆರಂಭಫಲಕ ತೋರಿದರು, ವಜ್ರಮುನಿ ಯವರ ಕಿರಿಯ ಪುತ್ರ ಜಗದೀಶ್ ವಜ್ರಮುನಿ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

‘ಯಲಾಕುನ್ನಿ’ ಖ್ಯಾತ ನಟ ವಜ್ರಮುನಿ ಅವರ ಚಿತ್ರಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದ ಪದ. ಈಗ ಆ ಪದವೇ ಚಿತ್ರದ ಶೀರ್ಷಿಕೆಯಾಗಿದೆ. ‘ಮೇರಾ ನಾಮ್ ವಜ್ರಮುನಿ’ ಎಂಬ ಅಡಿಬರಹ ಕೂಡ ಇದೆ.

ನಾನು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನಿರ್ದೇಶಕ ಪ್ರದೀಪ್ ಬಹಳ ಚೆನ್ನಾಗಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದ ಮುಕ್ಕಾಲು ಭಾಗ 1981 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶ್ರೀರಂಗಪಟ್ಟಣ, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಗಂಜಾಂ ಬಳಿ ಪುರಾತನ ದೇವಾಲಯವಿದ್ದು, ಆ ದೇವಾಲಯದಲ್ಲೇ ಹೆಚ್ಚಿನ ಚಿತ್ರೀಕರಣವಾಗಲಿದೆ. ಚಿತ್ರಕ್ಕಾಗಿ ವಿಶೇಷ ಸೆಟ್ ಸಹ ಹಾಕಲಾಗುವುದು ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದು ನಾಯಕ ಕೋಮಲ್ ಕುಮಾರ್ ಮನವಿ ಮಾಡಿದರು.

ನಾನು ಕನ್ನಡದ ಹಿರಿಯ ನಿರ್ದೇಶಕರ ಬಳಿ ಕೆಲಸ ಮಾಡಿದ್ದೀನಿ . ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಈ ಹಿಂದೆ ಸಡಗರ ಚಿತ್ರ ನಿರ್ಮಿಸಿದ್ದ ಮಹೇಶ್ ಗೌಡ್ರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.  ಮತ್ತೊಂದು ವಿಶೇಷವೆಂದರೆ  ವಜ್ರಮುನಿ ಯವರ ಮೊಮ್ಮಗ ಆಕರ್ಶ್ ಈ ಚಿತ್ರದ ಮೂಲಕ  ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಹೊಸ ಪ್ರತಿಭೆ ನಿಸರ್ಗ ಈ ಚಿತ್ರದ ನಾಯಕಿ.‌ ಯತಿರಾಜ್ ಜಗ್ಗೇಶ್, ಫ್ರೆಂಚ್ ಬಿರಿಯಾನಿ ಮಹಾಂತೇಶ್, ಜಯಸಿಂಹ ಮುಸುರಿ, ಅರವಿಂದ್ ರಾವ್, ಮಂಜು ಪಾವಗಡ, ರಾಜು ತಾಳಿಕೋಟೆ, ಶಿವರಾಜ್, ಬಿರಾದರ್, ವೆಂಕಟೇಶ್ ಪ್ರಸಾದ್, ಉಮೇಶ್ ಸಕ್ಕರೆನಾಡು, ಅನಿಲ್ ಯಾದವ್ ಇನ್ನು ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಧರ್ಮವಿಶ್ ಸಂಗೀತ ‌ನಿರ್ದೇಶನ ಹಾಗೂ ಉದಯ್ ಲೀಲಾ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ , ವಿನೋದ್ ರವರ ಸಾಹಸ  ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ಕೋಮಲ್ ಕುಮಾರ್  ವಜ್ರಮುನಿಯಾದರೆ, ಅವರ ಬಲಗೈ ಬಂಟನಾಗಿ ಜಯಸಿಂಹ ಮುಸುರಿ ಕನೆಕ್ಷನ್ ಕಾಳಪ್ಪನಾಗಿ  ಕಾಣಿಸಿ ಕೊಳ್ಳಲಿದ್ದಾರೆ. ಚಿತ್ರದ ಹಿನ್ನಲೆ  ಗೋವಿನ ಹಾಡಿನಲ್ಲಿ ಬರುವ ವ್ಯಾಘ್ರ ಹುಲಿ ಅರ್ಭುತ ಮತ್ತು ಸತ್ಯವೇ ಭಗವಂತನೆಂದ ಪುಣ್ಯಕೋಟಿಯ ಕಥೆಯಿಂದ ಪ್ರೇರಿತವಾಗಿದೆ.  ಏಪ್ರಿಲ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಪ್ರದೀಪ್ ಹೇಳಿದರು.

ಇದು ನನ್ನ ಎರಡನೇ ನಿರ್ಮಾಣದ ಚಿತ್ರ . ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಮಹೇಶ್ ಗೌಡ್ರು. ನಾಯಕಿ ನಿಸರ್ಗ ಹಾಗೂ ಚಿತ್ರದಲ್ಲಿ ನಟಿಸುತ್ತಿರುವ ಯತಿರಾಜ್, ಮಾಹಂತೇಶ್, ಆಕರ್ಶ್,‌ ಅರವಿಂದ್ ರಾವ್, ಮಂಜು ಪಾವಗಡ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಉದಯ್ ಲೀಲಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ನನ್ನ ಮೊಮ್ಮಗ ಆಕರ್ಶ್ ಈ ಚಿತ್ರದಲ್ಲಿ ಕೋಮಲ್ ಅವರ ಮಗನ   ಪಾತ್ರದಲ್ಲಿ ಅಭಿನಯಿಸುತ್ತಿದ್ದಾನೆ. ಅವನಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಲಕ್ಷ್ಮೀ ವಜ್ರಮುನಿ ಶುಭ ಹಾರೈಸಿದರು.

Demo
Share. Facebook Twitter WhatsApp Pinterest LinkedIn Tumblr Telegram Email

Related Posts

ದೊಡ್ಮನೆ ಆಟಕ್ಕೆ ಎಂಟ್ರಿ ಬಗ್ಗೆ ಮೇಘಾ ಶೆಟ್ಟಿ ಕೊಟ್ಟ ಉತ್ತರವೇನು?

October 2, 2023

ಅಕ್ಟೋಬರ್ 3ಕ್ಕೆ ವಿಚಾರಣೆಗೆ ಬರುವಂತೆ ನಟ ನಾಗಭೂಷಣ್‌ʼಗೆ ನೋಟಿಸ್!

October 2, 2023

’ಶುಗರ್ ಫ್ಯಾಕ್ಟರಿ’ಯಲ್ಲಿ ಡಾರ್ಲಿಂಗ್ ಕೃಷ್ಣ ಮಿಂಚಿಂಗ್…ಯಾವಾಗ ರಿಲೀಸ್ ಆಗ್ತಿದೆ ಸಿನಿಮಾ?

September 30, 2023

ಸಂಯುಕ್ತಾ ಬೋಲ್ಡ್​ ಡಾನ್ಸ್​​, ನೆಟ್ಟಿಗರ ತರಾಟೆ – ಡ್ಯಾನ್ಸರ್ ಕಿಶನ್ ರಿಯಾಕ್ಷನ್ ಹೀಗಿತ್ತು!

September 30, 2023

‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕಲೆಕ್ಷನ್ ಎಷ್ಟು ಗೊತ್ತಾ: ಕೇಳಿದ್ರೆ ಅಬ್ಬಾ ಅನ್ಸುತ್ತೆ!

September 30, 2023

ರಾಕಿಭಾಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್ – ಸಲಾರ್ ರಿಲೀಸ್ ಬಳಿಕ‌ ಕೆಜಿಎಫ್-3 ಕೆಲಸ ಶುರು

September 30, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.