ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ತನಿಖೆ ಚುರುಕುಗೊಂಡಿದೆ. ಆರೋಪಿಗಳು ಬಳಿ ಇದ್ದ ಕೋಟ್ಯಂತರ ರೂ. ಬೆಲೆ ಬಾಳುವ ಐಶಾರಾಮಿ ಕಾರು ಮತ್ತು ಹಣವನ್ನು ಎಸ್ಐಟಿ ಜಪ್ತಿ ಮಾಡಿದೆ.
ಆರೋಪಿ ತ್ಯನಾರಾಯಣ ವರ್ಮಾ ಬಳಿ ಇದ್ದ 8.2 ಕೋಟಿ ರೂ. ಮತ್ತು 3 ಕೋಟಿ ರೂ. ಲ್ಯಾಂಬೋರ್ಗಿನಿ, 1.2 ಕೋಟಿ ರೂ. ಬೆಲೆ ಬಾಳುವ ಬೆಂಜ್ ಕಾರನ್ನು ಹೈದರಾಬಾದ್ನಲ್ಲೇ ಸೀಜ್ ಮಾಡಲಾಗಿದೆ. ಹಣ ಕೊಟ್ಟು ಕಾರು ಬಿಡಿಸಿಕೊಳ್ಳುವಂತೆ ಎಸ್ಐಟಿ ಸೂಚನೆ ನೀಡಿದೆ.
ಹಣ ಎಷ್ಟು ಸೀಜ್?
ನಿಗಮದ ಎಂಡಿ ಪದ್ಮನಾಭ ಬಳಿ 3.92 ಕೋಟಿ ರೂ., ನಾಗೇಶ್ವರ ರಾವ್ ಮನೆಯಿಂದ 1.5 ಕೋಟಿ ರೂ., ಚಂದ್ರಮೋಹನ್ ಬಳಿಯಿಂದ 30 ಲಕ್ಷ ರೂ., ಜಗದೀಶ್ ಬಳಿಯಿಂದ 15 ಲಕ್ಷ ರೂ. ಹಣ ಸೀಜ್ ಮಾಡಲಾಗಿದೆ.
ಸತ್ಯನಾರಾಯಣ ಇಟಕಾರಿ ಖಾತೆಯಲ್ಲಿದ್ದ 7 ಕೋಟಿ ರೂ. ಹಣವನ್ನು ಫ್ರೀಜ್ ಮಾಡಲಾಗಿದೆ. ವಾಲ್ಮೀಕಿ ಹಗರಣದಲ್ಲಿ ತೇಜ 1 ಕೋಟಿ ರೂ. ಕಮಿಷನ್ ಪಡೆದಿದ್ದ. ಆ 1 ಕೋಟಿ ರೂ. ಹಿಂದಿರುಗಿಸಲು ತೇಜ ಈಗ ಒಪ್ಪಿಗೆ ನೀಡಿದ್ದಾನೆ. ಅಷ್ಟೇ ಅಲ್ಲದೇ ಬೇರೆ ಖಾತೆಗೆ ಹೋಗಿದ್ದ 2 ಕೋಟಿ ರೂ. ನಿಗಮದ ಖಾತೆಗೆ ವಾಪಸ್ ಬಂದಿದೆ. ಇನ್ನೂ 15-20 ಕೋಟಿ ರೂ. ಹಣ ರಿಕವರಿ ಆಗುವ ನಿರೀಕ್ಷೆಯಲ್ಲಿ ಎಸ್ಐಟಿಯಿದೆ.