ಬೆಂಗಳೂರು: ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಸೋಮವಾರ ರಾಜಧಾನಿಯಲ್ಲಿ ಧಾರಾಕಾರವಾಗಿ ಸುರಿಯಿತು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲು ವಾತಾವರಣ ಕಾಣಿಸಿ ಕೊಂಡಿತ್ತು. ಸಂಜೆ 4 ಗಂಟೆ ಬಳಿಕ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು.
ಸಂಜೆ 7 ಗಂಟೆಗೆ ಶುರುವಾದ ಮಳೆಯು ಕೋರಮಂಗಲ, ಮಡಿ ವಾಳ, ವಿಲನ್ ಗಾರ್ಡನ್, ಡೇರಿ ಸರ್ಕಲ್, ಜಕ್ಕೂರು ಕೆ.ಆರ್. ಮಾರುಕಟ್ಟೆ, ಮೆಜೆಸ್ಟಿಕ್ ದಯಾನಂದನಗರ, ಜಯನಗರ ಜೆ.ಪಿ.ನಗರ ಬಸವನಗುಡಿ ಕತ್ತರಿಗುಪ್ಪೆ ಇಟ್ಟಮಡು, ನಾಯಂಡಹಳ್ಳಿ, ಮೈಸೂರು ರಸ್ತೆ, ಕೆಂಗೇರಿ, ವಿಜಯನಗರ, ಮಲ್ಲೇಶ್ವರ, ಯಶವಂತಪುರ ಪೀಣ್ಯ, ಜಾಲಹಳ್ಳಿ ಕ್ರಾಸ್ ಹೆಬ್ಬಾಳ ಸೇರಿ ನಗರದ ಹಲವೆಡೆ ಬಿರುಸಾಗಿ ಸುರಿಯಿತು.
ಕೆಲವೆಡೆ ಮುಖ್ಯ ರಸ್ತೆ ಜಲಾವೃತಗೊಂಡಿದ್ದರಿಂದ ವಾಹನಗಳ ಸಂಚಾರ ಅಸ್ತವ್ಯಸ್ತವಾಯಿತು.ಮೇಲ್ಲೇತುವೆಗಳಲ್ಲಿ ವಾಹನಗಳು ನಿಧಾನವಾಗಿ ಸಾಗಬೇಕಾಯಿತು