ಬೆಂಗಳೂರು/ಕಲಬುರಗಿ : ರಾಜ್ಯದಲ್ಲಿ ಮುಂಗಾರು ಹೊಡೆತದಿಂದ ತರಕಾರಿ ಬೆಲೆ ದಿಢೀರನೆ ಗಗನಕ್ಕೇರಿದ್ದು ವಾರ ಕಳೆದರೂ ಬೆಲೆ ಕಡಿಮೆ ಆಗಿಲ್ಲ. ಕೊಂಚ ಮಾತ್ರ ಏರುಪೇರು ಕಂಡುಬಂದಿದೆ. ಆದ್ರೆ ಟೊಮ್ಯಾಟೋ ಬೆಲೆ ಮಾತ್ರ ಹೆಚ್ಚುತ್ತಲೇ ಇದೆ. ಬೆಂಗಳೂರಿನಲ್ಲಿ ಈರುಳ್ಳಿ- 30 ರೂ. ಟೊಮೆಟೊ – 102ರೂ. ಹಸಿರು ಮೆಣಸಿನಕಾಯಿ 64 ರೂ ಇದೆ.
ಕಲಬುರಗಿ ಜಿಲ್ಲೆಯಲ್ಲಿ ಟೊಮೇಟೋ ಬೆಲೆ ಮತ್ತೆ ಹೆಚ್ಚಾಗಿದೆ. ಕಳೆದ ವಾರ ಪ್ರತಿ ಕಿಲೋ ಟೊಮೇಟೊಗೆ ನೂರು ರೂಪಾಯಿ ಇತ್ತು. ಈ ವಾರ ಪ್ರತಿ ಕಿಲೋ ಟೊಮೇಟೊ ನೂರಾ ನಲವತ್ತರಿಂದ ನೂರಾ ಐವತ್ತು ರೂಪಾಯಿಗೆ ಮಾರಟವಾಗುತ್ತಿದೆ. ಹೀರೇಕಾಯಿ 80ರಿಂದ 90ರೂಗೆ ಜಿಗಿದಿದೆ. ಬೆಂಡೆಕಾಯಿ 70ರಿಂದ 80 ರೂ ಆಗಿದೆ. ಹಾಗಲಕಾಯಿ 90 ರೂ ಇದೆ. ಸವತೆಕಾಯಿ 80ರಿಂದ 100ರೂ ಆಗಿದೆ. ಮೆಣಸಿನಕಾಯಿ 100ರಿಂದ 120 ಆಗಿದೆ. ಬೀನ್ಸ್ 140ರಿಂದ 160 ರೂ ಆಗಿದೆ. ಆಲುಗಡ್ಡೆ 80 ರಿಂದ 100ರೂ ಆಗಿದೆ. ಚವಳಿಕಾಯಿ 80ರಿಂದ 100ಕ್ಕೆ ಏರಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಬೆಳಗಾವಿಯಲ್ಲಿ ಬಹುತೇಕ ತರಕಾರಿಗಳ ದರದಲ್ಲಿ ಇಳಿಕೆಯಾಗಿದೆ. ಟೊಮೇಟೊ ಪ್ರತಿ ಕೆಜಿಗೆ 80 ರಿಂದ 100 ರೂ. ಇದ್ದಿದ್ದು ಈಗ 60 ರಿಂದ 70 ರೂ ಆಗಿದೆ. ಬೀನ್ಸ್ ಪ್ರತಿ ಕೆಜಿಗೆ 100 ರೂ ಇದ್ದದ್ದು ಈಗ 80 ರೂ ಆಗಿದೆ. ಹೂಕೋಸು ಪ್ರತಿ ಕೆಜಿಗೆ 25 ರೂ. ಇದ್ದದ್ದು ಈಗ 20 ರೂ ಆಗಿದೆ. ಕ್ಯಾರೆಟ್ ಪ್ರತಿ ಕೆಜಿಗೆ 35-40 ರೂ ಇದ್ದದ್ದು ಈಗ 25 ರಿಂದ 30 ರೂ. ಆಗಿದೆ. ಹಾಗಲಕಾಯಿ ಪ್ರತಿ ಕೆಜಿಗೆ 50 ರೂ. ಇದ್ದದ್ದು ಈಗ 40 ರೂ ಆಗಿದೆ. ಎಲೆಕೋಸು ಪ್ರತಿ ಕೆಜಿಗೆ 10 ರೂ. ಇದ್ದದ್ದು ಈಗ 12 ರೂ ಆಗಿದೆ. ಬೀಟ್ರೂಟ್ ಪ್ರತಿ ಕೆಜಿಗೆ 40 ರೂ. ಇದ್ದದ್ದು ಈಗ 35 ರೂ ಆಗಿದೆ. ಬದನೆಕಾಯಿ ಪ್ರತಿ ಕೆಜಿಗೆ 35 ರೂ. ಇದ್ದದ್ದು ಈಗ 30 ರೂ ಆಗಿದೆ. ಹೀರೆಕಾಯಿ ಪ್ರತಿ ಕೆಜಿಗೆ 40 ರೂ. ಇದ್ದದ್ದು ಈಗ 30 ರೂ ಆಗಿದೆ. ಶುಂಠಿ ಪ್ರತಿ ಕೆಜಿಗೆ 250 ರೂ. ಇದ್ದಿದ್ದು ಈಗ 220 ರೂ ಆಗಿದೆ. ಮೆಣಸಿನಕಾಯಿ 60 ರೂ. ಇದ್ದಿದ್ದು ಈಗ 50 ರೂ ಆಗಿದೆ. ಕ್ಯಾಪ್ಸಿಕಮ್ 50 ರೂ ಇದ್ದಿದ್ದು ಈಗ 40 ರೂ ಆಗಿದೆ. ಸವತೆಕಾಯಿ 40 ರೂ ಇದ್ದಿದ್ದು ಈಗ 30 ರೂ ಆಗಿದೆ.