ಕನ್ನಡ ಸಾಹಿತ್ಯ ಲೋಕದ ಹಿರಿಯ ಸಾಹಿತಿ, ಖ್ಯಾತ ಕಾದಂಬರಿಕಾರ ಕೆ.ಟಿ. ಗಟ್ಟಿ (K.T Gatti) ಇಂದು ನಿಧನರಾಗಿದ್ದಾರೆ. ಕಾಸರಗೋಡು ಜಿಲ್ಲೆಯ ಕೂಡ್ಲು ನಿವಾಸಿಯಾಗಿದ್ದ ಗಟ್ಟಿ ಅವರಿಗೆ 85 ವರ್ಷ ವಯಸ್ಸಾಗಿತ್ತು. ಉಡುಪಿಯ ಟಿ.ಎಂ.ಪೈ ಮಹಾವಿದ್ಯಾಲಯದಲ್ಲಿ ಅಧ್ಯಾಪಕರೂ ಆಗಿದ್ದ ಗಟ್ಟಿ, ಕಾದಂಬರಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದರು.
ಕರ್ನಾಟಕ ರಾಜ್ಯೋತ್ಸವ, ಅಕಾಡೆಮಿ ಪುರಸ್ಕಾರಗಳು ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ಇಂದು ಮಧ್ಯಾಹ್ನ 3ರ ತನಕ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಸಂಜೆ ಮಂಗಳೂರಿನ ಕೆಎಂಸಿ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.
ಕನ್ನಡಕ್ಕೆ ವಿಶಿಷ್ಟ ಕೊಡುಗೆಯನ್ನು ಕೊಟ್ಟ ಮಹತ್ವದ ಲೇಖಕರು. ಸುಮಾರು ಮೂರು ದಶಕಗಳ ಕಾಲ ಅವರ ಒಡನಾಟದ ಸವಿಯನ್ನು ಅನುಭವಿಸಿದ ಸಾರ್ಥಕತೆ ನನ್ನದು. ನಾವು ಚಿಕ್ಕವರಿದ್ದಾಗ ಅವರ ಕಾದಂಬರಿ-ಕತೆಗಳು ಕನ್ನಡದ ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿಯೂ ಬರುತ್ತಿದ್ದವು. ಹಾಗೆ ನೋಡಿದರೆ ಅವರ ಬಗ್ಗೆ ನನಗೆ ಒಲವನ್ನು ಮೂಡಿಸಿದವಳು ತಂಗಿ ಮಾಲಿನಿ ಗುರು ಪ್ರಸನ್ನ. ಅಬ್ರಾಹ್ಮಣ ನನ್ನನ್ನು ಅಪಾರವಾಗಿ ಸೆಳೆದ ಮೊದಲ ಕಾದಂಬರಿ ಅಲ್ಲಿಂದ ನಾನು ಅವರ ಕತೆ-ಕಾದಂಬರಿಗಳನ್ನು ಹುಡುಕಿ ಓದಲು ಆರಂಭಿಸಿದೆ. ‘ತರಂಗ’ ವಾರ ಪತ್ರಿಕೆಯಲ್ಲಿ ‘ನಿರಂತರ’ ಎನ್ನುವ ಕಾದಂಬರಿ ಧಾರಾವಾಹಿಯಾಗಿ ಬಂದಿತು. (ಇದರ ಮೇಲೆ ರಿಪೋರ್ಟ್ ಫ್ರಂ 2020 ಪ್ರಭಾವವಿತ್ತು ಅನ್ನೋದು ಗೊತ್ತಾಗಿದ್ದು ಬಹಳ ತಡವಾಗಿ) ಇದು ಎಷ್ಟು ಇಷ್ಟವಾಗಿ ಬಿಟ್ಟಿತು ಎಂದರೆ ಆಗ ಕನ್ನಡದ ಶ್ರೇಷ್ಠ ಕಾದಂಬರಿಕಾರರು ಯಾರು? ಎಂದರೆ ನಾನು ನಿಸ್ಸಂದೇಹವಾಗಿ ಕೆ.ಟಿ.ಗಟ್ಟಿ ಅನ್ನುತ್ತಿದ್ದೆ. ‘ಮನೆ’, ‘ಕಾಮಯಜ್ಞ’, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ತೇ, ಕೂಪ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಗಿನ ಮನೆ ಹೀಗೆ ಬಹುಷ: