ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಬಿಗ್ ಹಿಟ್ ಪಡೆದ ನಟ ವಿಜಯ್ ದೇವರಕೊಂಡಾಗೆ ಇತ್ತೀಚೆಗೆ ತಕ್ಕ ಮಟ್ಟಿನ ಗೆಲುವು ಸಿಕ್ಕಿಲ್ಲ. ವಿಜಯ್ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗುತ್ತಿವೆ. ಹೀಗಾಗಿ ದೊಡ್ಡದೊಂದು ಹಿಟ್ ಸಿನಿಮಾದ ನೀಡಲು ವಿಜಯ್ ದೇವರಕೊಂಡ ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಹೊಸ ಸಿನಿಮಾದ ಕೆಲಸಗಳನ್ನು ಅವರು ಭರದಿಂದ ನಡೆಸುತ್ತಾ ಇದ್ದಾರೆ. ಸದ್ಯ ವಿಜಯ್ 12ನೇ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು ಚಿತ್ರಕ್ಕೆ ತಾತ್ಕಾಲಿಕವಾಗಿ ‘VD12’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಶೂಟ್ ವೇಳೆ ವಿಜಯ್ ಗಾಯಗೊಂಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಶೂಟಿಂಗ್ ನಿಲ್ಲಿಸಬಾರದು ಎಂದು ಹೇಳಿದ್ದಾರೆ ಎನ್ನಲಾಗಿದೆ.
ವಿಜಯ್ ದೇವರಕೊಂಡ ನಟನೆಯ ‘VD12’ ಚಿತ್ರವನ್ನು ಗೌತಮ್ ತಿನ್ನನುರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಆ್ಯಕ್ಷನ್ ದೃಶ್ಯಗಳ ಶೂಟ್ ವೇಳೆ ವಿಜಯ್ಗೆ ಗಾಯವಾಗಿದೆ. ಅವರು ವೈದ್ಯರ ಸೂಚನೆ ಪ್ರಕಾರ ವಿಶ್ರಾಂತಿ ಪಡೆಯಬೇಕಿತ್ತು. ಅವರ ರಿಕವರಿಗೆ ಸಾಕಷ್ಟು ಸಮಯ ಬೇಕಿದೆ. ಆದರೆ, ವಿಜಯ್ ಅವರು ತಮ್ಮ ಪ್ಲ್ಯಾನ್ ಪ್ರಕಾರವೇ ಶೂಟ್ ಮಾಡಲು ನಿರ್ಧರಿಸಿದ್ದಾರೆ.
ಸದ್ಯ ವಿಜಯ್ ದೇವರಕೊಂಡ ಅವರು ಫಿಸಿಯೋಥೆರಪಿಗೆ ಒಳಗಾಗಿದ್ದಾರೆ. ಈಗ ವಿಜಯ್ ಶೂಟಿಂಗ್ ವಿಳಂಬ ಮಾಡಿದರೆ ಎಲ್ಲಾ ಕೆಲಸಗಳು ವಿಳಂಬ ಆಗಬಹುದು ಎನ್ನುವ ಭಯ ಕಾಡಿದೆ. ನಂತರ ಉಳಿದ ಕಲಾವಿದರ ಡೇಟ್ಸ್ ಪಡೆದು ಮತ್ತೆ ಶೂಟ್ ಮಾಡಬೇಕು ಎಂದರೆ ಮತ್ತಷ್ಟು ಸಮಯ ಹಿಡಿಯಲಿದೆ ಎಂಬ ಕಾರಣಕ್ಕೆ ನೋವಿನ ನಡುವೆಯೂ ಶೂಟಿಂಗ್ ನಲ್ಲಿ ಭಾಗಿಯಾಗಲು ನಿರ್ಧರಿಸಿದ್ದಾರೆ.
‘ಲೈಗರ್’ ಹಾಗೂ ‘ದಿ ಫ್ಯಾಮಿಲಿ ಸ್ಟಾರ್’ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಸೋತಿವೆ. ಈ ಕಾರಣಕ್ಕೆ ಅವರು ಬ್ರೇಕ್ ಪಡೆಯದೆ ಶೂಟ್ ಮಾಡಲು ನಿರ್ಧರಿಸಿದ್ದಾರೆ. ಗಾಯಗೊಂಡರೂ ಅವರು ಶೂಟಿಂಗ್ ನಿಲ್ಲಿಸುವ ಆಲೋಚನೆಯಲ್ಲಿ ಇಲ್ಲ. ಶತಾಯ ಗತಾಯ ಮುಂದಿನ ವರ್ಷ ಭರ್ಜರಿ ಹಿಟ್ ನೀಡಲು ಡಿಸೈಡ್ ಮಾಡಿದ್ದಾರೆ.